ಹಸ್ತಪ್ರತಿಗಳು ಅಮೂಲ್ಯ ಸಂಪತ್ತು

7
ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್

ಹಸ್ತಪ್ರತಿಗಳು ಅಮೂಲ್ಯ ಸಂಪತ್ತು

Published:
Updated:
ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಟಿ.ಕೆ. ಉಮೇಶ್ ಉದ್ಘಾಟಿಸಿದರು 

ಚಾಮರಾಜನಗರ: ‘ಹಸ್ತಪ್ರತಿಗಳು ಪ್ರಪಂಚದ ಅತ್ಯಮೂಲ್ಯ ಸಂಪತ್ತು. ಇವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ವಿಶೇಷ ಆಸಕ್ತಿ ವಹಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಟಿ.ಕೆ. ಉಮೇಶ್ ಮಂಗಳವಾರ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ, ಇತಿಹಾಸ ವಿಭಾಗ ಮತ್ತು ರಂಗವಾಹಿನಿ ಸಂಸ್ಥೆಯಿಂದ ‘ಹಸ್ತಪ್ರತಿಗಳ ಮಹತ್ವ, ಗ್ರಂಥಸಂರಕ್ಷಣೆ ಮತ್ತು ಅರಿವು ಜಾಗೃತಿ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕತೆಯ ಬೆಳವಣಿಯೊಂದಿಗೆ ನೂತನ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ಹಸ್ತಪ್ರತಿಗಳ ಸಂರಕ್ಷಣೆಗೆ ಪ್ರಾಚ್ಯವಿದ್ಯಾ ಸಂಶೋಧನಾಲಯ ಮುಂದಾಗಬೇಕು. ಭೂಮಿ ಮೇಲಿನ ವಸ್ತುಗಳು ಶಾಶ್ವತವಲ್ಲ; ಎಲ್ಲವೂ ನಶಿಸುತ್ತವೆ. ಹೀಗಿರುವಾಗ ಹಸ್ತಪ್ರತಿಗಳ ಸಂರಕ್ಷಣೆ ಮುಖ್ಯವಾಗುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಪ್ರಾಕೃತ ಗ್ರಂಥಗಳು, ವಚನ ಸಾಹಿತ್ಯದ ಎಲ್ಲ ಹಸ್ತಪ್ರತಿಗಳು ಮತ್ತು ಗ್ರಂಥಗಳನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ’ ಎಂದರು.

ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ. ಎಸ್‌.ಶಿವರಾಜಪ್ಪ ಮಾತನಾಡಿ, ‘ಹಸ್ತಪ್ರತಿಗಳು, ಗ್ರಂಥಗಳಿಗೆ ವಿಶೇಷ ಮೌಲ್ಯವಿದೆ. ನಮ್ಮಲ್ಲಿ 70 ಸಾವಿರ ಹಸ್ತಪ್ರತಿಗಳು ಹಾಗೂ 45 ಸಾವಿರ ವಿವಿಧ ಅಪರೂಪದ ಗ್ರಂಥಗಳಿವೆ. ಪ್ರಾಚ್ಯವಸ್ತುಗಳ ಸಂರಕ್ಷಣೆಯಲ್ಲಿ ದೇಶದ ಪ್ರಾಚ್ಯವಿದ್ಯಾ ಸಂಶೋಧನಾಲಯ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳಲ್ಲಿ ಸಿಗುವಂತಹ ಪ್ರತಿಗಳನ್ನು ಕನ್ನಡದಲ್ಲೇ ಪರಿಚಯಿಸುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶ’ ಎಂದು ತಿಳಿಸಿದರು.

ಕನ್ನಡೀಕರಣಗೊಂಡ ಹಸ್ತಪ್ರತಿಗಳು ಹೊರ ಬಂದರೆ ಜನಸಮಾನ್ಯರಿಗೆ ಅರ್ಥವಾಗಲಿದೆ. ಇದರಿಂದ ಹೆಚ್ಚಿನ ಅರಿವು ಮೂಡಲಿದೆ. ಹಳೆಯ ವಸ್ತುಗಳನ್ನು ಮನೆಯಿಂದ ಹೊರಗೆ ಕೊಡಬಾರದು ಎನ್ನುವಂತಹ ಮೂಢನಂಬಿಕೆಗೆ ಜನರು ಜೋತುಬೀಳಬಾರದು. ಪ್ರಾಚೀನ ಹಸ್ತಪ್ರತಿ, ಗ್ರಂಥಗಳನ್ನು ಸಂಸ್ಥೆಗೆ ನೀಡಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಆರ್.ಸುಮತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್. ವಿನಯ್, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಶಿವಬಸವಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !