ಹೆಣ್ಣು ಚಿರತೆಯ ಕಳೇಬರ ಪತ್ತೆ

7

ಹೆಣ್ಣು ಚಿರತೆಯ ಕಳೇಬರ ಪತ್ತೆ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಬಿಸಲ್ವಾಡಿ ಸಮೀಪದ ವಡ್ಗಲ್‌ಪುರ ಸಮೀಪದ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಹೆಣ್ಣು ಚಿರತೆಯೊಂದರ ಕಳೆಬರ ಪತ್ತೆಯಾಗಿದೆ.

‘ಚಿರತೆಯ ವಯಸ್ಸು ಎಂಟು ವರ್ಷ ಎಂದು ಅಂದಾಜಿಸಲಾಗಿದ್ದು, ಕೆಲವು ದಿನಗಳ ಹಿಂದೆ, ವಯೋಸಹಜವಾಗಿ ಮೃತಪಟ್ಟಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌  ‘ಪ್ರಜಾವಾಣಿ’ಗೆ ತಿಳಿಸಿದ‌ರು. 

ಗುಡ್ಡದಲ್ಲಿ ಕುರುಚಲು ಗಿಡಗಳ ನಡುವೆ ಚಿರತೆಯ ಶವ ಸೋಮವಾರ ದನಗಾಹಿಗಳ ಕಣ್ಣಿಗೆ ಬಿತ್ತು. ಅವರು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ತಂದಿದ್ದರು. 

ಮಂಗಳವಾರ ಡಾ.ಪಿ.ಶಂಕರ್‌ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್‌, ವಲಯ ಅರಣ್ಯಾಧಿಕಾರಿ ಮಹದೇವಯ್ಯ, ಅರಣ್ಯ ರಕ್ಷಕ ಸುರೇಶ್‌, ಸಿಬ್ಬಂದಿ ದೊರೆನಾಯಕ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !