ವೇಗದ ಅಂತರ್ಜಾಲ ವ್ಯವಸ್ಥೆ ‘ಲೈ–ಫೈ’

7

ವೇಗದ ಅಂತರ್ಜಾಲ ವ್ಯವಸ್ಥೆ ‘ಲೈ–ಫೈ’

Published:
Updated:
li-fi technology

ಅಂತರ್ಜಾಲ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಈಗ ಕಷ್ಟ. ಅಂತರ್ಜಾಲ ವ್ಯವಸ್ಥೆಯಲ್ಲಿ ವೈ–ಫೈ ಸೌಲಭ್ಯ ಹಲವಾರು ಬದಲಾವಣೆಗಳನ್ನು ತಂದಿದೆ. ಇದು ಬಳಕೆದಾರರಿಗೆ ಅನುಕೂಲಕರವಾಗಿದ್ದರೂ, ಕೆಲವು ಲೋಪಗಳಿಂದ ಕೂಡಿದೆ. ಹೀಗಾಗಿಯೇ ಇದರ ಸ್ಥಾನದಲ್ಲಿ ಲೈ–ಫೈ ತಂತ್ರಜ್ಞಾನವನ್ನು ಬಳಕೆಗೆ ತರಲು ಕೆಲವು ಸಂಸ್ಥೆಗಳು ಯೋಚಿಸುತ್ತಿವೆ.

ಹೇಗೆ ಕೆಲಸ ಮಾಡುತ್ತದೆ?

ಹಳೆಯ ಮಾದರಿಯ ಎಥರ್ನೆಟ್‌ ಕೇಬಲ್‌ಗಳು ಮತ್ತು ಪ್ರಸ್ತುತ ಬಳಕೆಯಾಗುತ್ತಿರುವ ರೂಟರ್‌ಗಳು ಇಲ್ಲೂ ಇರುತ್ತವೆ. ಆದರೆ, ಮನೆಗಳಲ್ಲಿ ಅಳವಡಿಸಿರುವ ಎಲ್‌ಇಡಿ ದೀಪಗಳ ಕಾಂತಿ ತರಂಗಗಳು ಡೇಟಾ ಪೂರೈಸುವುದು ಈ ತಂತ್ರಜ್ಞಾನದ ವಿಶೇಷ. ವಿವರಿಸಿ ಹೇಳುವುದಾದರೆ, ಸರ್ವರ್‌ನಿಂದ ಬರುವ ಅಂತರ್ಜಾಲ ಡೇಟಾ, ಲ್ಯಾಂಪ್‌ ಡ್ರೈವರ್‌ ಮೂಲಕ ಎಲ್‌ಇಡಿ ದೀಪಗಳು ಹೊರಹೊಸೂಸುವ ಕಾಂತಿ ತರಂಗಗಳಿಂದ ಬರುತ್ತದೆ.

ಈ ಡೇಟಾವನ್ನು, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಅಳವಡಿಸಿರುವ ಫೊಟೊ ಡಿಟೆಕ್ಟರ್‌ಗಳು ಗ್ರಹಿಸಿ ಕಂಪ್ಯೂಟರ್ ಅಥವಾ ಮೊಬೈಲ್‌ಗಳಿಗೆ ರವಾನಿಸುತ್ತವೆ. ಅಂದರೆ ಪ್ರಸ್ತುತ ರೇಡಿಯೊ ತರಂಗಗಳ ಮೂಲಕ ಲಭ್ಯವಾಗುತ್ತಿರುವ ಡೇಟಾ ನಮಗೆ ಲಭ್ಯವಾಗುತ್ತಿರುವ ರೇಡಿಯೊ ತರಂಗಗಳಿಗಿಂತ ನೂರುಪಟ್ಟು ಹೆಚ್ಚಿನ ಕಾಂತಿಯ ವೇಗದಲ್ಲಿ ಲಭಿಸುತ್ತದೆ. ಮಿನುಗುತ್ತಾ ಬರುವ ಈ ಕಾಂತಿ ನಮ್ಮ ಕಣ್ಣಿಗೆ ಯಾವುದೇ ಹಾನಿ ಮಾಡುವುದಿಲ್ಲ.

ಬಳಕೆಗೆ ಯಾವಾಗ ಬರಲಿದೆ?

ಇದರಿಂದ ಹಲವಾರು ಉಪಯೋಗಗಳು ಇವೆ. ಆದರೂ ಇದು ವ್ಯಾಪಕವಾಗಿ ಬಳಕೆಗೆ ಬರಲು ಇನ್ನೂ ತಡವಾಗಬಹುದು. ಇದು ಖಾಸಗಿ ಬಳಕೆದಾರರಿಗೆ ಮುಕ್ತವಾಗುವ ಮುನ್ನ, ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿದೆ.

ಪ್ರಯೋಜನವೇನು?

* ಸೆಕೆಂಡಿಗೆ 224 ಗಿಗಾಬೈಟ್ ವೇಗದಲ್ಲಿ ಅಂತರ್ಜಾಲ ಪೂರೈಸಲು ಸಾಧ್ಯ ಎಂಬುದು ಇತ್ತೀಚಿನ ಸಂಶೋಧನೆಗಳಲ್ಲಿ ಸಾಬೀತಾಗಿದೆ.

* ಈ ಲೆಕ್ಕದಲ್ಲಿ 1.5ಜಿಬಿ ಸಾಮರ್ಥ್ಯದ ವಿಡಿಯೊ, ಮ್ಯೂಸಿಕ್‌ ಇತ್ಯಾದಿ ಫೈಲ್‌ಗಳನ್ನು ಕೇವಲ
ಒಂದು ಸೆಕೆಂಡ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಎಲ್‌ಇಡಿ ದೀಪಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಅಳವಡಿಸಿಕೊಳ್ಳುವುದು ಮತ್ತು ಬಳಸುವುದು ಸುಲಭ.

ಹೆಚ್ಚು ಸುರಕ್ಷತೆ

* ಕಾಂತಿ ತರಂಗಗಳು ಗೋಡೆ ದಾಟಿ ಹೊರಗೆ ಹೋಗುವ ಸಾಧ್ಯತೆ ಇಲ್ಲದಿರುವುದರಿಂದ ಲೈ–ಫೈ ಡೇಟಾ ಸಂಕೇತಗಳು ನಿರ್ದಿಷ್ಟ 
ಪ್ರದೇಶದಲ್ಲೇ ಇರುತ್ತವೆ. ಕನ್ನಹಾಕುವವರ ಕೈಗೆ ಸಿಗುವುದು ಕಷ್ಟ.

* ಎಲೆಕ್ಟ್ರಾನಿಕ್ ಸಾಧನ ಅಥವಾ ಉಪಕರಣಗಳ ನಡುವೆ ನಡೆಯುವ ಸಂವಹನವನ್ನು ಬಳಕೆದಾರರು ಸುಲಭವಾಗಿ ಪರೀಕ್ಷಿಸಬಹುದು. ವೈ–ಫೈ ಮತ್ತು ಬ್ಲೂಟೂತ್‌ಗಳಿಗೆ ಒದಗಿಸುವಂತೆ ಪ್ರತ್ಯೇಕ ಸುರಕ್ಷತೆ ಒದಗಿಸುವ ಅವಶ್ಯಕತೆ ಇಲ್ಲ.

* ಬೆಳಕು ಎಲ್ಲೆಡೆಯೂ ಇರುವುದರಿಂದ ಮನುಷ್ಯನ ಕಣ್ಣಿಗೆ ಮತ್ತು ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗದು.

ಖರ್ಚು ಕಡಿಮೆ

* ಎಲ್‌ಇಡಿ ದೀಪದ ಬೆಳಕನ್ನು ಬಳಸುವುದರಿಂದ ಹೆಚ್ಚಿನ ವಿದ್ಯುತ್‌ ಪೂರೈಸುವ ಅಗತ್ಯ ಇರುವುದಿಲ್ಲ.

* ಲೈ–ಫೈ ಉಪಕರಣಗಳಲ್ಲಿ ಬಳಸುವ ಬಿಡಿಭಾಗಗಳು ವೈ–ಫೈ ಉಪಕರಣಗಳಲ್ಲಿ ಬಳಸುವ ಬಿಡಿಭಾಗಗಳಿಗಿಂತ ಅಗ್ಗ.

ಸಮಸ್ಯೆಗಳೂ ಇವೆ

* ಪ್ರಸ್ತುತ ಬಳಕೆಯಲ್ಲಿರುವ ಹಲವು ಉಪಕರಣಗಳು ಮತ್ತು ಸಾಧನಗಳು ಕಾಂತಿ ತರಂಗಗಳ ಮೂಲಕ ಬರುವ ದತ್ತಾಂಶಗಳನ್ನು ಸ್ವೀಕರಿಸುವ ಮತ್ತು ಸಂಗ್ರಹಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಇವು ಲೈ–ಫೈ ತರಂಗಗಳನ್ನು ಸ್ವೀಕರಿಸುವುದು ಕಷ್ಟ.

* ಕೆಲವು ಉಪಕರಣಗಳು ಲೈ–ಫೈ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿದ್ದರೂ ಅವು ದೊಡ್ಡ ಗಾತ್ರದಲ್ಲಿವೆ. ಅವನ್ನು ಸುಲಭವಾಗಿ ಬಳಸಲು ಸಾಧ್ಯವಿಲ್ಲ.

* ವೈ–ಫೈನಿಂದ ಲೈ–ಫೈಗೆ ಬದಲಾಗುವುದು ಅಷ್ಟೊಂದು ಸುಲಭವಲ್ಲ. ಕೆಲವು ತಂತ್ರಜ್ಞಾನ ಸಮಸ್ಯೆಗಳಿವೆ ಎಂಬುದು ತಂತ್ರಜ್ಞರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !