ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಫಲಿತಾಂಶ: 105ರಿಂದ 117ಕ್ಕೇರಿದ ಬಿಜೆಪಿಯ ಸಂಖ್ಯಾಬಲ
LIVE

ಅತೃಪ್ತ ಶಾಸಕರ ರಾಜೀನಾಮೆ, ಶಾಸಕ ಸ್ಥಾನದಿಂದ ಅನರ್ಹತೆ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆ ಲೆಕ್ಕಾಚಾರಗಳ ಪರಿಣಾಮವಾಗಿ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಫಲಿತಾಂಶ ಇನ್ನೇನು ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಉಪ ಚುನಾವಣಾ ಕಣದಲ್ಲಿರುವ 13 ಅನರ್ಹ ಶಾಸಕರ ಪಾಲಿಗೆ ಇದು ನಿರ್ಣಾಯಕ ದಿನ. ಫಲಿತಾಂಶದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.
Last Updated 9 ಡಿಸೆಂಬರ್ 2019, 14:52 IST
ಅಕ್ಷರ ಗಾತ್ರ
12:2409 Dec 2019

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಿಸಿದ ಬಿಜೆಪಿ

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶದ ಅನುಸಾರ, ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳಲು ಶಕ್ತವಾಗಿದ್ದರೆ, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಸೋತು ಸುಣ್ಣವಾಗಿದೆ. ಫಲಿತಾಂಶದ ಪರಿಣಾಮ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಗಿದೆ. ಇದರೊಂದಿಗೆ ಬಿಜೆಪಿಯ ಸಂಖ್ಯಾಬಲವು 105ರಿಂದ 117ಕ್ಕೇರಿದೆ. ಪ್ರಸ್ತುತ 222 ಸದಸ್ಯಬಲವಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವುದು 112 ಮಾತ್ರ.

11:0309 Dec 2019

ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

11:0109 Dec 2019

ಕೆಟ್ಟ ಸರ್ಕಾರ ತೆಗೆದ ಆತ್ಮ ತೃಪ್ತಿ ಇದೆ: ಡಾ.ಕೆ.ಸುಧಾಕರ್

10:5709 Dec 2019

ನನಗೆ ರಾಜೀನಾಮೆ ಅಥವಾ ಅಧಿಕಾರ ಬಿಟ್ಟುಕೊಡಲು ಯಾವುದೇ ನೋವಿಲ್ಲ: ದಿನೇಶ್ ಗುಂಡೂರಾವ್

ಸ್ಥಳೀಯ ಸಂಸ್ಥೆಗಳು ಚುನಾವಣೆ, ಸಮ್ಮಿಶ್ರ ಸರ್ಕಾರ, ಶಾಸಕರ ರಾಜೀನಾಮೆ, ಅವರ ವಿರುದ್ಧ ಸ್ಪೀಕರ್ ಬಳಿ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟದಲ್ಲಿ ನಾನು ಸಕ್ರಿಯನಾಗಿದ್ದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿರುವ ರೀತಿ ನನಗೆ ತೃಪ್ತಿಯಿದೆ. ರಾಜ್ಯದಲ್ಲಿ ಪಕ್ಷದ ಹಿನ್ನಡೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಪಕ್ಷದ ನಿಷ್ಠ ನಾನು. ನನಗೆ ರಾಜೀನಾಮೆ ಅಥವಾ ಅಧಿಕಾರ ಬಿಟ್ಟುಕೊಡಲು ಯಾವುದೇ ನೋವಿಲ್ಲ. 
ನನ್ನ ಶಕ್ತಿಮೀರಿ ನಾನು ಕೆಲಸ ಮಾಡಿದ್ದೇನೆ. ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ. ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ. ಆತ್ಮಾವಲೋಕನಕ್ಕೆ ಸಮಯವಿದೆ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ನಾವು ಹೋರಾಟ ನಡೆಸುತ್ತೇವೆ.

 ಮುಂದೆ ಯಾರೇ ಪಕ್ಷದ ಅಧ್ಯಕ್ಷರಾದರೂ ನಾನು ಸಹಕಾರ ನೀಡುತ್ತೇನೆ. ಈ ದೇಶಕ್ಕೆ ಕಾಂಗ್ರೆಸ್ ಅಗತ್ಯವಿದೆ. ಕಾಂಗ್ರೆಸ್ ಕಟ್ಟುವುದು ನನ್ನ ಜವಾಬ್ದಾರಿ. ಅದಕ್ಕೆ ನನ್ನ ಸಹಕಾರ ಸದಾ ಇದ್ದೇ ಇರುತ್ತೆ. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡುತ್ತೇನೆ

10:5209 Dec 2019

ನಮ್ಮ ಪಕ್ಷದ ವಿರುದ್ಧ ಹೋದವರನ್ನು ಸ್ಪೀಕರ್‌ ಅನರ್ಹಗೊಳಿಸಬೇಕು: ದಿನೇಶ್ ಗುಂಡೂರಾವ್

ನಮ್ಮ ಪಕ್ಷದ ವಿರುದ್ಧ ಹೋದವರನ್ನು ಸ್ಪೀಕರ್‌ ಅನರ್ಹಗೊಳಿಸಬೇಕು. ನ್ಯಾಯಾಲಯದಲ್ಲಿಯೂ ಅವರ ವಿರುದ್ಧ ಹೋರಾಟ ನಡೆಸಿದ್ದವು. ಈ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಎಐಸಿಸಿ ಅವರು ಮುಕ್ತ ಅವಕಾಶ ಕೊಟ್ಟಿದ್ದರು. ನನ್ನ ನೈತಿಕ ಜವಾಬ್ದಾರಿ ಮತ್ತು ರಾಜಕೀಯ ಜವಾಬ್ದಾರಿ ಬಹಳ ಇದೆ. ನಾನು ನಿನ್ನೆಯೆ ನಮ್ಮ ನಾಯಕರ ಜೊತೆಗೆ ಮಾತನಾಡಿದ್ದೆ. ಕಳೆದ ಜುಲೈನಲ್ಲಿ ರಾಹುಲ್ ಗಾಂಧಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನಾನು ಹಲವು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದೆ. ಎಲ್ಲರ ಸಹಕಾರ ನನಗೆ ಸಿಕ್ಕಿದೆ.

10:5009 Dec 2019

ಚುನಾವಣೆ ಮುಗಿದ ಮೇಲೆ ರಾಜ್ಯದ ಹಿತವೇ ನಮಗೆ ಮುಖ್ಯ: ದಿನೇಶ್ ಗುಂಡೂರಾವ್


ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮ. ಜನತಾ ನ್ಯಾಯಾಲಯದ ತೀರ್ಪು ಅಂತಿಮ. ಅದನ್ನು ಗೌರವಿಸುತ್ತೇವೆ. ಅದನ್ನು ತಪ್ಪಾಗಿ ಗ್ರಹಿಸಲು ಹೋಗುವುದಿಲ್ಲ. ನಮಗೆ ಸಹಜವಾಗಿಯೇ ನೋವಾಗಿದೆ. ನಮ್ಮ ಅಪೇಕ್ಷೆ ಬೇರೆಯೇ ಇತ್ತು. ಆದರೆ ಫಲಿತಾಂಶ ನೋಡಿದಾಗ ಜನರ ಅಪೇಕ್ಷೆ ಬೇರೆಯಾಗಿರುವುದು ತಿಳಿಯಿತು. ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ. ಹುಣಸೂರಿನಿಂದ ಮಂಜುನಾಥ್, ಶಿವಾಜಿನಗರದಿಂದ ರಿಜ್ವಾನ್ ಅರ್ಷದ್‌, ಪಕ್ಷೇತರರಾಗಿ ಶರತ್ ಬಚ್ಚೇಗೌಡ ಗೆದ್ದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ.

ಚುನಾವಣೆ ವೇಳೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡ್ತೀವಿ. ಚುನಾವಣೆ ಮುಗಿದ ಮೇಲೆ ರಾಜ್ಯದ ಹಿತವೇ ನಮಗೆ ಮುಖ್ಯ.

10:4809 Dec 2019

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪತ್ರಿಕಾಗೋಷ್ಠಿ ಆರಂಭ

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯರಾದ ಖರ್ಗೆ ಮತ್ತು ಇತರ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಅನರ್ಹರಿಗೆ ಜನರು ಪಾಠ ಕಲಿಸುತ್ತಾರೆ. ಅವರಿಗೆ ಒಂದು ಪಾಠ ಕಲಿಸಬೇಕು ಎಂದೇ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. 

10:4309 Dec 2019

ಯಶವಂತಪುರ: ಎಸ್‌.ಟಿ. ಸೋಮಶೇಖರ್‌ಗೆ ಫಲ ನೀಡಿದ 'ಗೌಡ' ಭಿತ್ತಿ‍ಪತ್ರ

10:4109 Dec 2019

ಹೊಸಕೋಟೆ: ಶತಕೋಟಿ ಒಡೆಯ ಎಂಟಿಬಿಗೆ ಸೋಲು; ಶರತ್ ಬಚ್ಚೇಗೌಡಗೆ ಜಯ

10:3409 Dec 2019

ಕೆ.ಆರ್.ಪುರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಗೆಲುವು