ಪುನಃ ಬರೆಯಬಹುದಾದ ಕಾಗದ ಅಭಿವೃದ್ಧಿ

7

ಪುನಃ ಬರೆಯಬಹುದಾದ ಕಾಗದ ಅಭಿವೃದ್ಧಿ

Published:
Updated:

ಬೀಜಿಂಗ್: ಎಷ್ಟು ಬಾರಿ ಬರೆದಿದ್ದರೂ ಮತ್ತೆ ಬರೆಯಬಹುದಾದ ದೀರ್ಘಕಾಲ ಬಾಳಿಕೆ ಬರುವ ಕಾಗದವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನೂತನ ತಂತ್ರಜ್ಞಾನದ ಮೂಲಕ ಕಾಗದದ ಮೇಲಿನ ಮುದ್ರಿತ ಭಾಗವನ್ನು ಉಷ್ಣಾಂಶ ಬದಲಿಸಿ ಸಂಪೂರ್ಣವಾಗಿ ಅಳಿಸಿಹಾಕಬಹುದು. 

ಮುದ್ರಿತ ಕಾಗದಗಳನ್ನು ಒಮ್ಮೆ ಮಾತ್ರ ಬಳಸಿ ಎಸೆಯಲಾಗತ್ತದೆ. ಇದರಿಂದ ತ್ಯಾಜ್ಯ ಹೆಚ್ಚುವುದರ ಜೊತೆಗೆ ಮಾಲಿನ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇದನ್ನರಿತ ಫುಜಿಯಾನ್ ವಿಶ್ವವಿದ್ಯಾಲಯದ ಸಂಶೋಧಕರು ಮರು ಮುದ್ರಿಸಬಹುದಾದ ಕಾಗದದ ಅಭಿವೃದ್ಧಿಗೆ ಮುಂದಾಗಿ ಯಶಸ್ವಿಯಾಗಿದ್ದಾರೆ ಎಂದು ಎಸಿಎಸ್ ಅಪ್ಲೈಡ್ ಮೆಟೀರಿಯ್ಸ್ ಅಂಡ್ ಇಂಟರ್‌ಫೇಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ. 

ಈ ಕಾಗದವು ಸ್ಯಾಂಡ್‌ವಿಚ್ ರಚನೆ ಹೋಲುವ ಮೂರು ಪದರಗಳ ರೂಪದ್ದು. ಕಾಗದದ ಒಂದು ಬದಿಗೆ ನೀಲಿಬಣ್ಣ, ಮತ್ತೊಂದು ಬದಿಗೆ ಕಪ್ಪುಬಣ್ಣ ಬಳಿಯಲಾಗಿದ್ದು, ಅದನ್ನು ಬಿಸಿ ಮಾಡಿದಾಗ ಬಣ್ಣ ಕಳೆದುಕೊಳ್ಳುತ್ತದೆ. ತಾಪಮಾನ ಬದಲಿಸುವ ತಂತ್ರಜ್ಞಾನ ಆಧರಿಸಿ ಕಾಗದವು ಮರು ಮುದ್ರಣಕ್ಕೆ ಲಭ್ಯವಾಗುತ್ತದೆ. 

ಪುನಃ ಬರೆಯಬಹುದಾದ ಕಾಗದ ಅಭಿವೃದ್ಧಿಗೆ ಕೆಲವು ದಶಕಗಳಿಂದಲೂ ಸಂಶೋಧನೆ ನಡೆಯುತ್ತಾ ಬಂದಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !