ಭಾನುವಾರ, ನವೆಂಬರ್ 17, 2019
21 °C

ಸಂಕ್ರಾಂತಿಗೆ ಮಹೇಶ್‌ ಬಾಬು,ಅಲ್ಲು ಅರ್ಜುನ್ ಗುಡ್‌ ನ್ಯೂಸ್‌

Published:
Updated:
Prajavani

ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್‌ನ ಇಬ್ಬರು ಪ್ರಮುಖ ನಟರ ಸಿನಿಮಾಗಳು ಬಿಡುಗಡೆಯಾಗಲಿವೆ.

ಮಹೇಶ್‌ ಬಾಬು ಹಾಗೂ ಅಲ್ಲು ಅರ್ಜುನ್‌ ಅವರ ಸಿನಿಮಾಗಳು 2020ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿವೆ. ಎರಡೂ ಸಿನಿಮಾಗಳು ಒಂದೇ ವಾರದಲ್ಲಿ ಬಿಡುಗಡೆಯಾದರೆ ಬಾಕ್ಸ್‌ ಆಫೀಸ್‌ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂದು ನಿರ್ಮಾಪಕರು ಚಿಂತನೆ ನಡೆಸಿದ್ದಾರೆ.

ನಟ ಅಲ್ಲು ಅರ್ಜುನ್‌ ಅವರ ‘ಅಲ ವೈಕುಂಠಪುರಮುಲೋ’ ಸಿನಿಮಾ ಶೂಟಿಂಗ್ ಆರಂಭಗೊಂಡಿದೆ. ಇದು ಅವರ 19ನೇ ಸಿನಿಮಾ ಆಗಲಿದೆ. ಜನವರಿ 12ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕೌಟುಂಬಿಕ ಮನರಂಜನೆಯನ್ನು ಒಳಗೊಂಡ ರೊಮ್ಯಾಂಟಿಕ್‌ ಸಿನಿಮಾ ಇದಾಗಿದೆ.

‘ಜುಲೈ’ ಹಾಗೂ ‘s/o ಸತ್ಯಮೂರ್ತಿ’ ಸಿನಿಮಾಗಳನ್ನು ಒಟ್ಟಾಗಿ ಮಾಡಿದ್ದ ತ್ರಿವಿಕ್ರಮ್‌ ಶ್ರೀನಿವಾಸ್ ಹಾಗೂ ಅಲ್ಲು ಅರ್ಜುನ್ ಜೋಡಿ ಮತ್ತೆ ಈ ಸಿನಿಮಾದಲ್ಲಿ ಒಂದಾಗಿರುವುದರಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಮಹೇಶ್‌ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾ ಕೂಡ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಲಾಗಿದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್‌ ರವಿಪುಡಿ ನಿರ್ದೇಶನದ ಚಿತ್ರ, ಬಿಡುಗಡೆಯ ದಿನಾಂಕವನ್ನು ಮೊದಲೇ ಪ್ರಕಟಿಸಿತ್ತು. ಆದ್ದರಿಂದ ಈ ಎರಡರಲ್ಲಿ ಯಾವ ಸಿನಿಮಾ ತನ್ನ ಬಿಡುಗಡೆಯ ದಿನಾಂಕ ಬದಲಿಸಿಕೊಳ್ಳಲಿದೆ ಎಂಬ ಕುತೂಹಲ ಈಗ ಟಾಲಿವುಡ್‌ನಲ್ಲಿ ಗರಿಗೆದರಿದೆ.

ಪ್ರತಿಕ್ರಿಯಿಸಿ (+)