ಪತ್ನಿ ಜೊತೆ ಜಗಳವಾಡಿ ಟವರ್‌ ಏರಿದ!

7
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಪತ್ನಿ ಜೊತೆ ಜಗಳವಾಡಿ ಟವರ್‌ ಏರಿದ!

Published:
Updated:
Deccan Herald

ಚಾಮರಾಜನಗರ: ಹೆಂಡತಿಯ ಜೊತೆಗಿನ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬರು ತಾಲ್ಲೂಕಿನ ವೆಂಕಟಯ್ಯನಛತ್ರದಲ್ಲಿ ಶುಕ್ರವಾರ ಮೊಬೈಲ್‌ ಟವರ್‌ ಏರಿದ್ದಾರೆ.

ಸ್ಥಳೀಯ ನಿವಾಸಿ ಮಹೇಶ್‌ (30) ಟವರ್‌ ಏರಿದವರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಸಲವಾಡಿ ರಸ್ತೆಯಲ್ಲಿರುವ ಟವರ್‌ ಏರಿದ ಮಹೇಶ್‌, ಅರ್ಧದವರೆಗೆ ಹತ್ತಿದ ನಂತರ ಕೆಳಕ್ಕೆ ನೋಡಿ ಭಯಗೊಂಡು ಕಿರುಚಾಡಿದರು. ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು.

ರಾಮಸಮುದ್ರ ಠಾಣೆಯ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ, ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ.ನವೀನ್‌ ಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಟವರ್‌ನಿಂದ ಇಳಿಯುವಂತೆ ಪೊಲೀಸರು ಹಾಗೂ ಇತರ ಸಿಬ್ಬಂದಿ ಎಷ್ಟು ಬಾರಿ ಕೇಳಿಕೊಂಡರೂ ಮಹೇಶ್‌ ಒಪ್ಪಲಿಲ್ಲ. ನಂತರ, ಪೊಲೀಸ್‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ಟವರ್‌ ಏರಲು ನಿರ್ಧರಿಸಿದರು. ಇದಕ್ಕೂ ಮೊದಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅವರು ಕೈಗೊಂಡರು.

ಟವರ್‌ಗೆ ಹತ್ತಿದ ಭದ್ರತಾ ಸಿಬ್ಬಂದಿ ಮಹೇಶ್‌ ಅವರನ್ನು ಮನವೊಲಿಸಲು ಯತ್ನಿಸಿದರು. ಇದಕ್ಕೂ ಒಪ್ಪದ ಅವರು, ಹೆಂಡತಿ ಜೊತೆ ದೂರವಾಣಿಯಲ್ಲಿ ಮಾತನಾಡಬೇಕು ಎಂದು ಬೇಡಿಕೆ ಇಟ್ಟರು ಎನ್ನಲಾಗಿದೆ. ನಂತರ ಸಿಬ್ಬಂದಿಯೊಬ್ಬರು ತಮ್ಮ ಮೊಬೈಲ್‌ ಅನ್ನು ಅವರಿಗೆ ಕೊಟ್ಟರು. ಸ್ಥಳಕ್ಕೆ ಹೆಂಡತಿ ಬಂದ ನಂತರ ಕೆಳಗಿಳಿಯಲು ಒಪ್ಪಿದರು. ಅವರ ದೇಹಕ್ಕೆ ಹಗ್ಗವನ್ನು ಕಟ್ಟಿ ಕೆಳಕ್ಕೆ ಇಳಿಸಲು ಸಿಬ್ಬಂದಿ ಯಶಸ್ವಿಯಾದರು. 

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮೌನೇಶ್‌ ನಿಡುಗುಂಡಿ, ರಾಘವೇಂದ್ರ ಕರಿಗುಪ್ಪಿ, ಎಂ.ರಾಘವೇಂದ್ರ, ಕುಮಾರ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !