ಮಾವು, ಹಲಸು ಪ್ರಿಯರಿಗಾಗಿ 28, 29ರಂದು ಮೇಳ

ಮಂಗಳವಾರ, ಜೂನ್ 25, 2019
24 °C

ಮಾವು, ಹಲಸು ಪ್ರಿಯರಿಗಾಗಿ 28, 29ರಂದು ಮೇಳ

Published:
Updated:

ಬೆಂಗಳೂರು: ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ಮೇ 28 ಮತ್ತು 29ರಂದು ಮಾವು ಮತ್ತು ಹಲಸಿನ ಹಣ್ಣಿನ ಮೇಳ ಆಯೋಜಿಸಲಾಗಿದೆ.

ಜೂನ್‌ 1 ಮತ್ತು 2ರಂದು ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇದೇ ಮೇಳ ಜರುಗಲಿದೆ. ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಈ ಮೇಳ ಇರಲಿದೆ.

ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ಮೇಳಕ್ಕೆ ಚಾಲನೆ ನೀಡಲಿದ್ದು, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್, ‘ಭಾರತದಲ್ಲಿ ಸುಮಾರು 4 ಸಾವಿರ ಮಾವಿನ ತಳಿಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಸಾವಿರ ತಳಿಗಳನ್ನು ಸಮೀಕ್ಷೆ ಮೂಲಕ ಸಂಗ್ರಹಿಸಿ 750 ತಳಿಗಳನ್ನು ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದೇವೆ. ಇದರಲ್ಲಿ 25 ತಳಿಗಳು ಮಾತ್ರ ವಾಣಿಜ್ಯ ದೃಷ್ಟಿಯಿಂದ ಪ್ರಮುಖ ಎನಿಸಿವೆ. 80 ಗ್ರಾಂ.ನಿಂದ 2 ಕೆ.ಜಿವರೆಗೂ ಅಧಿಕ ತೂಕದ ಮಾವು ತಳಿಗಳು ಇರಲಿವೆ’ ಎಂದು ಹೇಳಿದರು.

‘ಹಲಸಿನಲ್ಲಿ ಸಾವಿರ ತಳಿಗಳನ್ನು ಗುರುತಿಸಲಾಗಿದೆ. ಸಂಸ್ಥೆಯಲ್ಲಿ 110 ತಳಿಗಳನ್ನು ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದು, ಅವುಗಳಲ್ಲಿ 80 ಬಗೆಯ ತಳಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದು ತಿಳಿಸಿದರು.

‘ರೈತರು 30ಕ್ಕೂ ಅಧಿಕ ತಳಿಗಳನ್ನಷ್ಟೇ ಕಂಡಿದ್ದಾರೆ. ಆದರೆ, ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಸುಮಾರು 550 ಮಾವು ತಳಿಗಳನ್ನು ಪ್ರದರ್ಶಿಸಲಿದ್ದೇವೆ. ಈ ತಳಿಗಳಲ್ಲಿ 180 ಬಗೆಗಳ ಅಪ್ಪೆ ಮಿಡಿ ಜಾತಿಯ ತಳಿಗಳೂ ಸೇರಿವೆ’ ಎಂದು ವಿವರಿಸಿದರು.

‘ಮೇಳದಲ್ಲಿ ಅರ್ಬನ್ ಅರ್ಕಾ ಕಿಟ್ ಬಿಡುಗಡೆ ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ ತಾರಸಿ ಹಾಗೂ ಚಿಕ್ಕ ಸ್ಥಳಗಳಲ್ಲಿ ಮನೆಗೆ ಬೇಕಾದ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಬೆಳೆಯಲು ಅನುಕೂಲವಾಗುವಂತೆ ಸಂಸ್ಥೆ ರೂಪಿಸಿದ ಕಿಟ್‌ ಇದಾಗಿದೆ. ಈ ಎಲ್ಲದರ ಬೀಜಗಳು ಕಿಟ್‌ನಲ್ಲಿ ಇರಲಿವೆ. ಕಿಟ್‌ನ ಬೆಲೆ ₹ 500’ ಎಂದರು.

ಮಾಹಿತಿಗೆ: 9448009684

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !