ಗೃಹ ಸಚಿವರಿಗೆ ತವರಲ್ಲಿ ಅದ್ಧೂರಿಯ ಸ್ವಾಗತ

7

ಗೃಹ ಸಚಿವರಿಗೆ ತವರಲ್ಲಿ ಅದ್ಧೂರಿಯ ಸ್ವಾಗತ

Published:
Updated:
Prajavani

ವಿಜಯಪುರ: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಬುಧವಾರ ತಡ ರಾತ್ರಿ ಬಂದ ಎಂ.ಬಿ.ಪಾಟೀಲರನ್ನು ಬೆಂಬಲಿಗರು, ಅಭಿಮಾನಿ ಪಡೆ ಅದ್ಧೂರಿಯಿಂದ ಸ್ವಾಗತಿಸಿತು.

ಬುಧವಾರ ತಡರಾತ್ರಿಯೇ ಸೊಲ್ಲಾಪುರ ರಸ್ತೆಯಲ್ಲಿನ ಸಚಿವರ ನಿವಾಸದ ಬಳಿ ಕಾತರದಿಂದ ಕಾದಿದ್ದ ಬೆಂಬಲಿಗರು, ಶುಭ ಹಾರೈಸಲು ಮುಗಿಬಿದ್ದರು. ಹಾದಿಯುದ್ದಕ್ಕೂ ಪಟಾಕಿ ಸಿಡಿಸಿ, ಸ್ವಾಗತ ಕೋರಲಾಯಿತು. ಎಂ.ಬಿ... ಎಂ.ಬಿ... ಘೋಷಣೆಗಳು ಮುಗಿಲು ಮುಟ್ಟಿದವು.

ಗುರುವಾರ ದಿನವಿಡಿ ಅಭಿನಂದನೆಗಳ ಮಹಾಪೂರವೇ ಹರಿದು ಬಂತು. ಹಾರ–ಶಾಲುಗಳಿಗೆ ಲೆಕ್ಕವಿರಲಿಲ್ಲ. ಮೈಸೂರು ಪೇಟ ತೊಡಿಸಿ, ಬುಟ್ಟಿಗಳಲ್ಲಿ ಗುಲಾಬಿ ಹೂವಿನ ಪುಷ್ಪವೃಷ್ಟಿಗೈದ ಎಂ.ಬಿ. ಬೆಂಬಲಿಗ ಪಡೆ, ಸಚಿವರಿಂದ ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !