ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ, ಗರಿ ಸಂಗ್ರಹಗಳ ಹವ್ಯಾಸಿ

Last Updated 31 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಏರೊಸ್ಪೇಸ್ ಎಂಜಿನಿಯರ್ ಆದರೂ 190ಕ್ಕೂ ಹೆಚ್ಚು ದೇಶಗಳ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ ಮಾವಳ್ಳಿಯ ವಿಜಯ್‌ ಸಿಂಹ. ಅವರು 14ನೇ ವಯಸ್ಸಿಗೇ ನಾಣ್ಯ ಸಂಗ್ರಹಿಸಲು ಆರಂಭಿಸಿದರು. ಕೇವಲ ನಾಣ್ಯಗಳನ್ನಷ್ಟೇ ಅಲ್ಲದೇ, ವಿವಿಧ ಹಕ್ಕಿಗಳ ಬಣ್ಣ ಬಣ್ಣದ ಗರಿಗಳನ್ನೂ ಅವರು ಸಂಗ್ರಹಿಸಿದ್ದಾರೆ.

ಸಂಗ್ರಹಿಸಿರುವ ನಾಣ್ಯಗಳು ಮತ್ತು ವಿವಿಧ ದೇಶಗಳ ಕರೆನ್ಸಿ ನೋಟುಗಳನ್ನು ಎಂದು ವಿಭಾಗ ಮಾಡಿ ಈಗಾಗಲೇ ನಾಲ್ಕು ಬಾರಿ ಪ್ರದರ್ಶಿಸಿದ್ದಾರೆ. ಇದರ ಜತೆಗೆ ಪಕ್ಷಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿವಿಧ ಪಕ್ಷಿಗಳ ಗರಿಗಳನ್ನೂ ಸಂಗ್ರಹಿಸಲು ಆರಂಭಿಸಿದ ಅವರುಆಸ್ಟ್ರಿಚ್‌, ಎಮು, ಮರಕುಟುಕ, ನವಿಲು ಹೀಗೆ ಸುಮಾರು 60 ಹಕ್ಕಿಗಳ ಗರಿಗಳನ್ನು ಪ್ರದರ್ಶಿಸಿದ್ದಾರೆ.

ದೇಶದಲ್ಲಿ ಬ್ರಿಟಿಷ್ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು, ಸ್ವಾತಂತ್ರ್ಯ ನಂತರದ ನಾಣ್ಯಗಳು, ಅಪರೂಪದ ನಾಣ್ಯಗಳು, ವಿದೇಶಿ ನಾಣ್ಯಗಳೂ ಸೇರಿದಂತೆ 2,500 ನಾಣ್ಯಗಳು ಅವರ ಸಂಗ್ರಹದಲ್ಲಿವೆ.

ಬ್ರೀಟಿಷ್ ಆಡಳಿತ ಕಾಲದಲ್ಲಿ ಚಲಾವಣೆಯಲ್ಲಿದ್ದ ಸುಮಾರು 50 ನಾಣ್ಯಗಳನ್ನು ಸಂಗ್ರಹಿಸಿರುವುದು ವಿಶೇಷ. ಸ್ವಾತಂತ್ರ್ಯ ನಂತರ ಭಾರತ ಸರ್ಕಾರ ಬಿಡುಗಡೆ ಮಾಡಿದ್ದ 5 ಪೈಸೆಯ ನಾಲ್ಕು ಬಗೆಯ ನಾಣ್ಯಗಳು, 10 ಪೈಸೆಯ 12 ಬಗೆಯ ನಾಣ್ಯಗಳು, 25 ಪೈಸೆಯ ಎರಡು ಬಗೆಯ ನಾಣ್ಯಗಳು ಹೀಗೆ ಒಂದೇ ಮುಖ ಬೆಲೆಯ ವಿವಿಧ ಬಗೆಯ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ.ಇದರಲ್ಲಿ ₹ 5, ₹ 10 ಹೀಗೆ ಹಲವು ನಾಣ್ಯಗಳೂ ಇವೆ.

‘ನಾಣ್ಯಗಳು ಎಂದರೆ ನನ್ನ ದೃಷ್ಟಿಯಲ್ಲಿ ಇತಿಹಾಸದ ಹೆಜ್ಜೆ ಗುರುತುಗಳು. ಆಯಾ ಸಂದರ್ಭಕ್ಕೆ ತಕ್ಕಂತೆ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ. ಉದಾಹರಣೆಗೆ ಸ್ವಾಮಿ ವಿವೇಕಾನಂದರ 125ನೇ ಜನ್ಮದಿನದ ಅಂಗವಾಗಿ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಇಂತಹ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟರೆ, ದೇಶದ ಮಹನೀಯರ ಬಗ್ಗೆ, ಘಟನಾವಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡಂತೆ’ ಎನ್ನುತ್ತಾರೆ ವಿಜಯ್ ಸಿಂಹ.

‘ಚಿಕ್ಕವನಿದ್ದಾಗ ಪಕ್ಕದ ಮನೆಯವರು ಒಮ್ಮೆ ಬಾಂಗ್ಲಾದೇಶದ ನಾಣ್ಯವನ್ನು ಕೊಟ್ಟಿದ್ದರು. ಅದು ನನ್ನ ಗಮನ ಸೆಳೆಯಿತು. ಹೀಗೆ ವಿವಿಧ ದೇಶಗಳ ನಾಣ್ಯಗಳನ್ನು ಸಂಗ್ರಹಿಸಬೇಕು ಎಂಬ ಆಸೆಯಾಯಿತು, ಕ್ರಮೇಣ ಪ್ರವೃತ್ತಿಯಾಯಿತು. ಅದೇ ರೀತಿ ಒಮ್ಮೆ ಮೈಸೂರು ಮೃಗಾಲಯಕ್ಕೆ ಹೋದಾಗ ಅಲ್ಲಿ ಬಿದ್ದಿದ್ದ ಹಕ್ಕಿಗಳ ಗರಿಗಳು ಗಮನ ಸೆಳೆದವು, ಅವನ್ನೂ ಸಂಗ್ರಹಿಸಲು ಮುಂದಾದೆ’ ಎನ್ನುತ್ತಾರೆ ಅವರು.

ನಾಣ್ಯಗಳನ್ನು ಸಂಗ್ರಹಿಸುವುದರ ಜತೆಗೆ ಅವುಗಳ ತಯಾರಿಗೆ ಬಳಸಿರುವ ಲೋಹ, ವಿದೇಶಿ ನಾಣ್ಯಗಳಾದರೆ, ಅದರ ಹಿನ್ನೆಲೆ ಹೀಗೆ ಪ್ರತಿಯೊಂದು ಮಾಹಿತಿಯನ್ನೂ ಅವರು ಕಲೆಹಾಕುತ್ತಾರೆ.

‍ಪಕ್ಷಿಗಳ ಮಾಹಿತಿ: ಗರಿಗಳನ್ನು ಸಂಗ್ರಹಿಸುವುದಷ್ಟೇ ಅಲ್ಲದೇ, ಆ ಪಕ್ಷಿಗಳ ಆಹಾರ, ಜೀವನ ಮತ್ತು ವರ್ತನೆ, ಸಂತಾನೋತ್ಪತ್ತಿ ಸಮಯ, ವಲಸೆ ಅವಧಿ, ಇತ್ಯಾದಿ ಮಾಹಿತಿಯನ್ನೂ ಅವರು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ.

ವಿಜಯ್ ಸಿಂಹ
ವಿಜಯ್ ಸಿಂಹ

ಸಂಪರ್ಕ ಸಂಖ್ಯೆ: 98865 89924

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT