ಕಾಡಿಗೆ ಹಚ್ಚಿದ ಕಣ್ಣುಗಳಲಿ ಅವಿತ ಕನಸು. ಗೋರಂಟಿ ಕೆಂಪಿನ ಚೆಂದದಲ್ಲಿ ಮುಖವಿನ್ನೂ ಕಳೆಗಟ್ಟಿದೆ. ಹಬ್ಬದ ಸಂಭ್ರಮದಲ್ಲಿ ನಿದ್ದೆಗೆಟ್ಟ ಮಗುವಿನ ಚೆಂದದ ಆಕಳಿಕೆ. ಮೋಡ ಕವಿದ ವಾತಾವರಣವಿದ್ದಾಗ ಮನೆಯಿಂದ ಹೊರಟಿದ್ದು, ಆಮೇಲೆ ಬಿಸಿಲು ಹತ್ತಿದ್ದೇ ಕಿರಿಕಿರಿಯಲ್ಲಿ ಅಳು ತಡೆಯಲಾಗುತ್ತಿಲ್ಲ. ಪ್ರಾರ್ಥನೆಯ ಮೌನದಲ್ಲಿಯೇ ಮೊಬೈಲ್ನಲ್ಲಿ ಆಟವಾಡಿದ ಕಂದಮ್ಮನಿಗೆ ಮನೆಗೆ ಹೋಗುವ ತವಕ.
ಬಣ್ಣಬಣ್ಣದ ಕೂಲಿಂಗ್ ಗ್ಲಾಸ್ಗಳಲ್ಲಿ ಹುದುಗಿದ ಕಣ್ಣುಗಳ ತುಂಟತನ ಅಳತೆಗೆ ಸಿಗುತ್ತಿಲ್ಲ. ಅಪ್ಪನ ಗಡ್ಡ ಎಳೆಯುತ್ತಿರುವ ಮಗುವಿನ ಬಾಯಿಗೆ ಮಿಠಾಯಿ ಗ್ಯಾರಂಟಿ. ಈದ್ ಉಲ್ ಫಿತ್ರ್ ಸಂದರ್ಭದಲ್ಲಿ ಮಿಲ್ಲರ್ಸ್ ರಸ್ತೆಯ ಮೈದಾನದಲ್ಲಿ ಸಂದದ್ದು ಪ್ರಾರ್ಥನೆಯಷ್ಟೇ ಅಲ್ಲ...