ಪುನೀತ್ ರಾಜ್ಕುಮಾರ್ ಅವರ ‘ರಾಜಕುಮಾರ’ ಚಿತ್ರವನ್ನು ಅಭಿಮಾನಿಗಳು ಸ್ವಾಗತಿಸಿದ ಪರಿ ಯಾವ ಜಾತ್ರೆಗೂ ಕಡಿಮೆ ಇಲ್ಲ.
‘ನರ್ತಕಿ’ ಚಿತ್ರಮಂದಿರದ ಮುಂದೆ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಹಾಡಿ ಕುಣಿದು ಕುಪ್ಪಳಿಸಿದ್ದಲ್ಲದೇ, ಚಿತ್ರಮಂದಿರದ ಒಳಗೆ ತಮ್ಮ ಅಭಿಮಾನದ ನಾಯಕನಿಗೆ ಹೂವು, ಬಣ್ಣದ ಚಮಕಿ ಎರಚಿ ಸಂಭ್ರಮಿಸಿದರು.