ಕೇಂದ್ರ ಸರ್ಕಾರ ದಿವಾಳಿ; ನಾಡಗೌಡ ವಾಗ್ದಾಳಿ

ಗುರುವಾರ , ಏಪ್ರಿಲ್ 25, 2019
21 °C
ಭರವಸೆ ಈಡೇರಿಸದ ನಾಯಕ ಪ್ರಧಾನಿ ಮೋದಿ

ಕೇಂದ್ರ ಸರ್ಕಾರ ದಿವಾಳಿ; ನಾಡಗೌಡ ವಾಗ್ದಾಳಿ

Published:
Updated:

ವಿಜಯಪುರ: ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿವಾಳಿಯಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ನೀಡಲು ಹಣವಿಲ್ಲವಾಗಿದೆ’ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ ನಾಡಗೌಡ ವಾಗ್ದಾಳಿ ನಡೆಸಿದರು.

‘ನರೇಗಾ ಯೋಜನೆಯಡಿ ರಾಜ್ಯಕ್ಕೆ ₹ 1500 ಕೋಟಿ ಬರಬೇಕಿದೆ. ಇದೂವರೆಗೂ ಈ ಹಣವನ್ನೇ ನೀಡಿಲ್ಲ. ರಾಜ್ಯ ಸರ್ಕಾರ ಕೂಲಿ ಕಾರ್ಮಿಕರಿಗಾಗಿ ₹ 800 ಕೋಟಿ ಪಾವತಿಸಿದೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೋದಿ ಸರ್ಕಾರ ಜನಪರವಿಲ್ಲ. ಕಾರ್ಪೊರೇಟ್‌ ಪರವಿದೆ. ಉದ್ಯಮಿಗಳ ₹ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡದೆ ಸಬೂಬು ಹೇಳುತ್ತಿದೆ. ವಾರ್ಷಿಕ ₹ 6000 ಮೊತ್ತವನ್ನು ಯಾವ ಪುರುಷಾರ್ಥಕ್ಕೆ ಕೊಟ್ಟಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ’ ಎಂದು ನಾಡಗೌಡ ಟೀಕಿಸಿದರು.

‘ಸಂವಿಧಾನ ಬಿಕ್ಕಟ್ಟು, ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗಾಗಿ ಕಾಂಗ್ರೆಸ್‌–ಜೆಡಿಎಸ್ ಒಂದಾಗಿವೆ. ಮೋದಿ ಈ ಹಿಂದೆ ನೀಡಿದ ಯಾವೊಂದು ಭರವಸೆ ಈಡೇರಿಸಿಲ್ಲ. ಪ್ರಣಾಳಿಕೆ, ಅಭಿವೃದ್ಧಿ ಕುರಿತಂತೆ ಮಾತನಾಡಲ್ಲ. ಈ ಹಿಂದೆ ಚಾಯ್ ವಾಲಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಇದೀಗ ಚೌಕಿದಾರ್‌ ಎನ್ನುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಮೋದಿ ಮೋದಿ ಎಂದು ಕೂಗಿದರೆ ಏನು ಆಗಲ್ಲ. ಎರಡು ಬಾರಿ ವಿಜಯಪುರವನ್ನು ಸಂಸತ್‌ನಲ್ಲಿ ಪ್ರತಿನಿಧಿಸಿರುವ ರಮೇಶ ಜಿಗಜಿಣಗಿ ಕೊಡುಗೆ ಏನು ? ತಮ್ಮ ಖಾತೆಯಿಂದ ಯಾವ ಅನುಕೂಲ ಕಲ್ಪಿಸಿದ್ದಾರೆ’ ಎಂದು ನಾಡಗೌಡ ಕೇಳಿದರು.

ಸಚಿವ ಎಂ.ಸಿ.ಮನಗೂಳಿ, ಶಾಸಕ ಡಾ.ದೇವಾನಂದ ಚವ್ಹಾಣ, ಅಭ್ಯರ್ಥಿ ಡಾ.ಸುನೀತಾ ಚವ್ಹಾಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !