ಮಹದೇಶ್ವರ ಬೆಟ್ಟ: ವಿಜೃಂಭಣೆಯ ಶಿವರಾತ್ರಿ ರಥೋತ್ಸವ

ಮಂಗಳವಾರ, ಮಾರ್ಚ್ 26, 2019
22 °C

ಮಹದೇಶ್ವರ ಬೆಟ್ಟ: ವಿಜೃಂಭಣೆಯ ಶಿವರಾತ್ರಿ ರಥೋತ್ಸವ

Published:
Updated:
Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು. 

ದೇವಸ್ಥಾನದ ಆವರಣದಲ್ಲಿ ತೇರು ಸಾಗುತ್ತಿದ್ದರೆ, ಈ ದೃಶ್ಯವನ್ನು ಕಣ್ತುಂಬಿಕೊಂಡ ಭಕ್ತರ ಬಾಯಿಂದ ಹೊರಹೊಮ್ಮುತ್ತಿದ್ದ ‘ಉಘೇ ಉಘೇ ಮಾದಪ್ಪ’ ಎಂಬ ಉದ್ಘೋಷ ಮುಗಿಲು ಮುಟ್ಟಿತ್ತು.

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಐದು ದಿನಗಳ ಜಾತ್ರೆಯ ಕೊನೆಯ ದಿನ ರಥೋತ್ಸವ ನಡೆಯಿತು. 

ಬೆಡಗಂಪಣ ಸಮುದಾಯದ ಸಂಪ್ರದಾಯದಂತೆ ಮಹದೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಾಲಯದ ಒಳಾಂಗಣದಲ್ಲಿಟ್ಟು, ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆ ಬಳಿಕ, ಬೇಡಗಂಪಣ ಸಮುದಾಯದ 101 ಪುಟ್ಟ ಹೆಣ್ಣು ಮಕ್ಕಳು ಬೆಲ್ಲದ ಆರತಿಯೊಂದಿಗೆ ಸಾಲೂರು ಬೃಹನ್ಮಠದ ಮಠಾಧೀಶರಾದ ಗುರುಸ್ವಾಮಿಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಸ್ಠಾಪಿಸಲಾಯಿತು. 

ಮಹದೇಶ್ವರ ಸ್ವಾಮಿಗೆ ಅರ್ಚಕರು ವಿವಿಧ ಪೂಜಾ ಕೈಕಂರ್ಯಗಳನ್ನು ನೆರವೇರಿಸಿದ ನಂತರ ತೇರನ್ನು ಎಳೆಯಲಾಯಿತು. ಸಾವಿರಾರು ಭಕ್ತರು ರಥಕ್ಕೆ ಧವಸ ಧಾನ್ಯ, ಕಾಳುಗಳನ್ನು ಎಸೆದು ಹರಕೆ ಅರ್ಪಿಸಿದರು. ಇನ್ನು ಕೆಲವರು ತೇರನ್ನು ಎಳೆದು ಹರಕೆ ತೀರಿಸಿದರು.  

ಐದು ದಿನಗಳ ಜಾತ್ರೆಯ ಸಂದರ್ಭದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !