ಬುರುಡೆ ಬಿಟ್ಟು ಹೋದ ಪ್ರಧಾನಿ: ಕುಮಾರಸ್ವಾಮಿ

ಮಂಗಳವಾರ, ಏಪ್ರಿಲ್ 23, 2019
29 °C
ಮೂರುದಿನ ಕಾಲ ನಿರಂತರ ಪ್ರಚಾರ, ನಾಳೆ ದೇವೇಗೌಡ–ಸಿದ್ದರಾಮಯ್ಯ ಜಂಟಿ ಪ್ರಚಾರ

ಬುರುಡೆ ಬಿಟ್ಟು ಹೋದ ಪ್ರಧಾನಿ: ಕುಮಾರಸ್ವಾಮಿ

Published:
Updated:
Prajavani

ಮಂಡ್ಯ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಬುರುಡೆ ಬಿಟ್ಟು ಹೋಗಿದ್ದಾರೆ. ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾರೂ ಬರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಬಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ವಾಗ್ದಾಳಿ ನಡೆಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿ ಗ್ರಾಮದಲ್ಲಿ ಕೆ.ನಿಖಿಲ್‌ ಪರ ಪ್ರಚಾರ ಮಾಡಿದ ಅವರು ‘ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲವು ಮುಖಂಡರು ನನ್ನನ್ನು ಮುಗಿಸಲು ನಿರ್ಧರಿಸಿದ್ದಾರೆ. ಆದರೆ ನೀವು ನನಗೆ ವಿಷ ನೀಡುವುದಿಲ್ಲ ಎಂಬ ನಂಬಿಕೆ ಇದೆ. ಜನರು ನನ್ನ ಕೈಬಿಡುವುದಿಲ್ಲ, ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಇನ್ನು ಆರು ತಿಂಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಲೋಕಸಭಾ ಚುನಾವಣೆಯ ನಂತರ ರೈತಪರ ಯೋಜನೆಗಳು ಜಾರಿಯಾಗಲಿವೆ. ‌‌ಜನರು ನನ್ನನ್ನು ನಂಬಬೇಕು’ ಎಂದು ಮನವಿ ಮಾಡಿದರು.

‘ಶೋಭಾ ಕರಂದ್ಲಾಜೆ ಬೆಂಗಳೂರಿನವರು. ಆದರೆ ಅವರು ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ಧಾರೆ. ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಕಣಕ್ಕಿಳಿದಿದ್ದಾರೆ. ನಿಖಿಲ್‌ ಮಂಡ್ಯದಲ್ಲಿ ನಿಂತರೆ ಅದು ಅಪರಾಧವೇ? ರೈತರು ಅಪ್ರಚಾರಗಳಿಗೆ ಕಿವಿಗೊಡಬಾರದು. ನಿಖಿಲ್‌ಗೆ ಬಡವರ ಮೇಲೆ ಕಾಳಜಿ ಇದೆ. ಹೀಗಾಗಿಯೇ ಚುನಾವಣೆಗೆ ನಿಲ್ಲಿಸಿದ್ದೇನೆ’ ಎಂದರು.

ಕಾಂಗ್ರೆಸ್‌ ಅತೃಪ್ತರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ ‘ಈ ಹಿಂದೆ ಕೆಲವರು ಮಂಡ್ಯದಲ್ಲಿ ಅಂಬರೀಷ್‌ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದರು. ಈಗ ಅವರ ಮನೆ ಉದ್ಧಾರ ಮಾಡಲು ಹೋಗಿದ್ದಾರೆ. ಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ದೂರಬೇಡಿ: ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ‘ಮಾಧ್ಯಮಗಳು ಜೆಡಿಎಸ್‌ ಮುಖಂಡರ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ನಮ್ಮ ಕಾರ್ಯಕರ್ತರಿಂದ ಹೆಚ್ಚುಕಡಿಮೆ ಆದರೆ ನನ್ನನ್ನು ದೂರಬೇಡಿ. ಬೆಳಿಗ್ಗೆ ಎದ್ದು ದೇವರ ಫೋಟೊ ನೋಡುವಂತಿಲ್ಲ, ಯಾವುದೇ ಟಿವಿ ಹಾಕಿದರೂ ಜೆಡಿಎಸ್‌ ಎದುರಾಳಿಗಳ ಮುಖವೇ ಕಾಣುತ್ತದೆ’ ಎಂದರು.

ವಿಷ್ಣು ಅಭಿಮಾನಿಗಳು ಜೆಡಿಎಸ್‌ಗೆ: ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿಷ್ಣುವರ್ಧನ್‌ ಅವರ 50ಕ್ಕೂ ಹೆಚ್ಚು ಅಭಿಮಾನಿಗಳು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಕೆಆರ್‌ಎಸ್‌ನಲ್ಲಿ 30, ಹೊಸಹಳ್ಳಿ ಗ್ರಾಮದ 20 ಮಂದಿ ಜೆಡಿಎಸ್‌ ಸೇರಿದರು. ನಿಖಿಲ್‌ ಪರ ಕೆಲಸ ಮಾಡುವುದಾಗಿ ಘೋಷಿಸಿದರು. ಕೆಆರ್‌ಎಸ್‌ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ ಪ್ರಚಾರ ಆರಂಭಿಸಿದರು. ಚಿತ್ರನಟ ವಿಷ್ಣವರ್ದನ್‌ ಅಭಿಮಾನಿಗಳು ವಿಷ್ಣವರ್ಧನ್‌ ಸ್ಮಾರಕ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ‘ಲೋಕಸಭಾ ಚುನಾವಣೆ ಮುಗಿದ ತಕ್ಷಣ ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಕುಮಾರಸ್ವಾಮಿ ಭರವಸೆ ನೀಡಿದರು.

ಮೂರುದಿನ ಮುಖ್ಯಮಂತ್ರಿ ಮಂಡ್ಯ ಕ್ಷೇತ್ರದಲ್ಲೇ ಉಳಿಯಲಿದ್ದು ನಿರಂತರ ಪ್ರಚಾರ ನಡೆಸಲಿದ್ದಾರೆ. ಏ. 12ರಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಲಿದ್ದಾರೆ.

**

380 ಕೆ.ಜಿ ಒಣದ್ರಾಕ್ಷಿ, ಗುಲಾಬಿ ಹಾರ
220 ಕೆ.ಜಿ ಒಣದ್ರಾಕ್ಷಿ, 160 ಕೆ.ಜಿ ಗುಲಾಬಿ ಸೇರಿ ಒಟ್ಟು 380 ಕೆ. ಜಿ ತೂಕದ ಬೃಹತ್‌ ಹಾರವನ್ನು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಹಾಕಿದರು. ನೂರಾರು ಎತ್ತಿನಗಾಡಿಗಳು, ಯುವಕರ ಬೈಕ್‌ ರ‍್ಯಾಲಿ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅವರ ವಾಹನದ ಮೇಲೆ ಷುಷ್ಪದ ಮಳೆ ಸುರಿಸಲಾಯಿತು.

ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯೊಬ್ಬರು ವಾಹನದ ಹಿಂದೆ ಓಡಿ ಬರುತ್ತಿದ್ದರು. ಇದನ್ನು ಗಮನಸಿದ ಕುಮಾರಸ್ವಾಮಿ ಬಸ್‌ ನಿಲ್ಲಿಸುವಂತೆ ಸೂಚಿಸಿದರು. ಬಸ್‌ ಹತ್ತಿದ ಮಹಿಳೆ ಸೆಲ್ಫಿ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !