ಕಾರ್ತಿಕ ಮಾಸ: ಲಕ್ಷ ದೀಪೋತ್ಸವ ನಾಳೆ

7

ಕಾರ್ತಿಕ ಮಾಸ: ಲಕ್ಷ ದೀಪೋತ್ಸವ ನಾಳೆ

Published:
Updated:

ಬೆಂಗಳೂರು: ಮುನೇಶ್ವರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಕಾರ್ತಿಕ ಮಾಸ ಲಕ್ಷ ದೀಪೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಇದೇ 3 ರಂದು ಬೆಳಿಗ್ಗೆ 9.30ಕ್ಕೆ ಆನೇಕಲ್ಲಿನ ಹಳೇಹಳ್ಳಿಯಲ್ಲಿ ನಡೆಯಲಿದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ರವೀಂದ್ರನಾಥ ರೆಡ್ಡಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ತಿಕ ದೀಪೋತ್ಸವವನ್ನು ಸಂಸದ ಡಿ.ಕೆ‌.ಸುರೇಶ್, ಧಾರ್ಮಿಕ ಸಮಾರಂಭವನ್ನು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !