ಬುಧವಾರ, ಸೆಪ್ಟೆಂಬರ್ 22, 2021
21 °C
16 ತಿಂಗಳ ಜೈಲುಶಿಕ್ಷೆಯಿಂದ ಮುಕ್ತ

ಮ್ಯಾನ್ಮಾರ್‌: ಇಬ್ಬರು ಪತ್ರಕರ್ತರ ಬಿಡುಗಡೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಬಿಕ್ಕಟ್ಟಿನ ಕುರಿತು ವರದಿ ಮಾಡಿದ್ದಕ್ಕಾಗಿ 16 ತಿಂಗಳಿನಿಂದ ಜೈಲಿನಲ್ಲಿದ್ದ ಇಬ್ಬರು ಪತ್ರಕರ್ತರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. 

ಆಡಳಿತ ಗೋಪ್ಯತೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ರಾಯಿಟರ್ಸ್ ಪತ್ರಕರ್ತರಾದ ವಾ ಲೋನ್ ಹಾಗೂ ಕ್ಯಾ ಸೋ ಓ ಅವರನ್ನು 2017ರ ಡಿಸೆಂಬರ್‌ನಲ್ಲಿ ಬಂಧಿಸಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. 

ಜೈಲಿನಿಂದ ಹೊರಬಂದ ಇಬ್ಬರೂ ನೆರೆದಿದ್ದ ಜನರತ್ತ ನಗುತ್ತಾ ಕೈಬೀಸಿದರು. ಇವರ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು ಹಾಗೂ ಬಿಡುಗಡೆಗಾಗಿ ಆಂದೋಲನ ನಡೆಸಲಾಗಿತ್ತು.  ‘ಬಂಧಿತ ಪತ್ರಕರ್ತರ ಕುಟುಂಬದವರು ಆಂಗ್ ಸಾನ್ ಸೂಕಿ ಹಾಗೂ ಅಧ್ಯಕ್ಷ ವಿನ್ ಮಯಂಟ್ ಅವರಿಗೆ ಪತ್ರ ಬರೆದಿದ್ದರು. ದೇಶದ ದೀರ್ಘಾವಧಿಯ ಹಿತಾಸಕ್ತಿ ಪರಿಗಣಿಸಿ ನಾಯಕರು ಇಬ್ಬರನ್ನೂ ಈ ನಿರ್ಧಾರ ಕೈಗೊಂಡರು’ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.