ನೈರೋಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ ನೂರಾರು ಪ್ರಯಾಣಿಕರು

ಶನಿವಾರ, ಮಾರ್ಚ್ 23, 2019
24 °C

ನೈರೋಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ ನೂರಾರು ಪ್ರಯಾಣಿಕರು

Published:
Updated:

ನೈರೋಬಿ(ಎಎಫ್‌ಪಿ): ಪ್ರತಿಭಟನೆ ವೇಳೆ ಗಲಭೆ ನಡೆಸಿದ ಕಾರ್ಮಿಕರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ನೂರಾರು ಪ್ರಯಾಣಿಕರು ನೈರೋಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ಕೀನ್ಯಾ ಏವಿಯೇಷನ್ ವರ್ಕರ್ಸ್‌ ಯೂನಿಯನ್‌(ಕೆಯುಡಬ್ಲ್ಯುಎ) ಕಾನೂನು ಬಾಹಿರವಾಗಿ ನಡೆಸಿದ ಮುಷ್ಕರದಿಂದಾಗಿ ಜೋಮೊ ಕೀನ್ಯಾಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯರಾತ್ರಿ ನಂತರ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಹೀಗಾಗಿ ‌ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬಾರದಂತೆ ಕೀನ್ಯಾ ವಿಮಾನ ನಿಲ್ದಾಣ ಪ್ರಾಧಿಕಾರ(ಕೆಎಎ) ತಿಳಿಸಿದೆ.

ಪ್ರತಿಭಟನೆಗೆ ಕರೆ ನೀಡಿದ ಯೂನಿಯನ್ ನಾಯಕರನ್ನು ಬಂಧಿಸಲು ಪೊಲೀಸರು ತೆರಳಿದಾಗ ಗಲಭೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !