ಶನಿವಾರ, ಜೂಲೈ 11, 2020
22 °C
ಮಕ್ಕಳ ಕವಿತೆ

ನವಿಲೆ ನವಿಲೆ

ಡಿ.ಎನ್. ಅಕ್ಕಿ Updated:

ಅಕ್ಷರ ಗಾತ್ರ : | |

Prajavani

ತಲೆಯ ಮೇಲೆ ಮೂರುಜುಟ್ಟು

ಗರಿಯ ತುಂಬಾ ಕಣ್ಣುಬೊಟ್ಟು

ನೀಲಿ ಹಸಿರು ಬಣ್ಣ ತೊಟ್ಟು

ಎತ್ತ ಹೊರಟೆ ನವಿಲೆ 

 

ಗಗನದಲ್ಲಿ ಕರಿಯ ಮುಗಿಲು

ಸುರಿವ ಮಳೆಯ ಹಿಗ್ಗೊಳು

ನಲ್ಲೆಯೊಡನೆ ಆಡಲು

ಕೇಕೇ ಹಾಕಿ ಕುಣಿಯಲು 

 

ಮೋಡ ಕವಿದ ಕತ್ತಲು

ಗುಡುಗು ಮಿಂಚು ಸುತ್ತಲು

ಭಯವಾಗದೆ ನಿನಗೆ ನವಿಲೆ

ಈ ದಟ್ಟ ಕಾಡು ಪೊದೆಯೊಳು 

 

ಕಾಡೊಳುಂಟು ಗೆಳೆಯರು

ಹೂವುಬಳ್ಳಿ ಮರ ಬಿದಿರು 

ಸವಿಯಹಣ್ಣು ಮಧುರಜೇನು

ಎಲ್ಲಾ ಇಹುದು ವನದೊಳು 

 

ಮಗು ತರಿಯಬೇಡ ಕಂಟಿಯ

ಕಡಿಯದಿರು ಗಿಡಗಂಟೆಯ

ಕಾಡೆತಾಯಿ ಕಾಡೆ ತಂದೆ

ಕಾಡೇ ನಮ್ಮ ತವರು

ಜೀವ ಪೊರೆವ ದೇವರು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.