ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪಿ.ವಿ ಸಿಂಧು ಚಾಂಪಿಯನ್‌

7

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪಿ.ವಿ ಸಿಂಧು ಚಾಂಪಿಯನ್‌

Published:
Updated:
ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪಿ.ವಿ ಸಿಂಧು ಚಾಂಪಿಯನ್‌

ಪುಜೌ, ಚೀನಾ: ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದು ಅಚ್ಚರಿ ಮೂಡಿಸಿದ್ದ ಭಾರತದ ಪಿ.ವಿ ಸಿಂಧು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಸನ್‌ ಯು ಅವರನ್ನು 21-11, 17-21, 21-11 ಸೆಟ್‌ಗಳ ಅಂತರದಲ್ಲಿ ಮಣಿಸಿ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.ಪಂದ್ಯ ಪ್ರಾರಂಭಗೊಂಡ 17 ನಿಮಿಷಗಳಲ್ಲಿ 21–11 ಅಂತರದಲ್ಲಿ ಮೊದಲ ಸೆಟ್‌ ಪೂರ್ಣಗೊಳ್ಳಿಸುವ ಮೂಲಕ ಎದುರಾಳಿ ಸನ್‌ ಯು ಅವರಿಗೆ ಕಠಿಣ ಪೈಪೋಟಿ ನೀಡಿದರು. ದ್ವಿತೀಯ ಸೆಟ್‌ನಲ್ಲಿ 17–21 ಅಂತರದಲ್ಲಿ ಸನ್‌ ಯು ಮುನ್ನಡೆ ಸಾಧಿಸಿದರು. ಆದರೆ ಧೃತಿಗೆಡದ ಪಿ.ವಿ ಸಿಂಧು ಅಂತಿಮ ಸೆಟ್‌ನಲ್ಲಿ 21–11 ಅಂತರ ಕಾಯ್ದುಕೊಳ್ಳುವ ಮೂಲಕ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry