ಬ್ಯಾಂಕ್‌ನಲ್ಲೇ ಸಾವು

7

ಬ್ಯಾಂಕ್‌ನಲ್ಲೇ ಸಾವು

Published:
Updated:
ಬ್ಯಾಂಕ್‌ನಲ್ಲೇ ಸಾವು

ಹೊಸಪೇಟೆ: ಹಣ ಜಮಾ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಬ್ಯಾಂಕ್‌ನಲ್ಲೇ ಮೃತಪಟ್ಟ ಘಟನೆ ಗುರುವಾರ ನಗರದಲ್ಲಿ ನಡೆದಿದೆ.

ನಗರದ ಟಿ.ಬಿ. ಡ್ಯಾಂ ಹಳೆ ಅಮರಾವತಿ ನಿವಾಸಿ ಅಯ್ಯನಗೌಡರ ಶೇಖರಗೌಡ (67) ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ವ್ಯವಸ್ಥಾಪಕರಾಗಿದ್ದರು.

ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆಗೆ ಹಣ ಜಮಾ ಮಾಡಲು ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೋಗಿದ್ದರು.

ತಿಂಗಳ ಮೊದಲ ದಿನವಾದ್ದರಿಂದ ಬ್ಯಾಂಕ್‌ನಲ್ಲಿ ಉದ್ದನೆಯ ಸಾಲು ಇತ್ತು. ಬಹಳ ಹೊತ್ತು ಸಾಲಿನಲ್ಲಿ ನಿಂತಿದ್ದರಿಂದ ಅಯಾಸಗೊಂಡ ಅವರು ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟರು. ಈ ಹಿಂದೆಯೂ ಅವರಿಗೆ ಹೃದಯಾಘಾತವಾಗಿತ್ತು ಎಂದು ಅವರ ಅಳಿಯ ಬಸವರಾಜ ತಿಳಿಸಿದರು. ಅಯ್ಯನಗೌಡರ ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.ಗ್ರಾಹಕರು ಹೇಳುವ ಪ್ರಕಾರ ಅಯ್ಯನಗೌಡರ ಅವರು ಅಯಾಸಗೊಂಡು ಬ್ಯಾಂಕಿನ ಬೆಂಚಿನ ಮೇಲೆ ಕುಳಿತಿದ್ದರು. ಈ ವೇಳೆ ಪ್ರಾಣ ಹೋಗಿದೆ

-ತಿಮ್ಮಾರೆಡ್ಡಿ

ವ್ಯವಸ್ಥಾಪಕ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry