ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದ ಪುಲ್ವಾಮ ಜಿಲ್ಲೆ: ಶಂಕಿತ ಉಗ್ರರಿಂದ ಬ್ಯಾಂಕ್‌ ಲೂಟಿ

Last Updated 8 ಡಿಸೆಂಬರ್ 2016, 10:10 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಶಂಕಿತ ಉಗ್ರರು ಬ್ಯಾಂಕ್‌ ಲೂಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮಿರದಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್‌ ಲೂಟಿಯಾಗಿದೆ.

ನಾಲ್ವರು ಮುಸುಕುಧಾರಿಗಳು ಪುಲ್ವಾಮ ಜಿಲ್ಲೆಯಲ್ಲಿನ ಅರಿಹಾಲ್‌ನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಶಾಖೆಗೆ ನುಗ್ಗಿ ಗುಂಡಿನಮಳೆಗರೆದು ನಗದು ದೋಚಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ನಗದು ಕೌಂಟರ್‌ನಿಂದ ಹಣ ದೋಚಿದ ಶಂಕಿತರು ಅಲ್ಲಿಂದ ಪರಾರಿ ಆಗುವ ಮುನ್ನ ಐದರಿಂದ ಆರು ಸುತ್ತು ಗುಂಡಿನ ದಾಳಿ ನಡೆಸಿದರು ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದಾರೆ.

ಶಂಕಿತ ಉಗ್ರರು ಅಂದಾಜು ₹ 10 ಲಕ್ಷ ದೋಚಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಉಗ್ರರು ನ.21ರಂದು ಮಧ್ಯಕಾಶ್ಮೀರದ ಛೋಹರ್‌ –ಇ–ಷರೀಫ್‌ ಪ್ರದೇಶದ ಬ್ಯಾಂಕ್‌ನಿಂದ ₹ 13 ಲಕ್ಷ ಲೂಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT