ಶಾಸ್ತ್ರೋಕ್ತವಾಗಿ ಜಯಲಲಿತಾ ಅಂತ್ಯ ಸಂಸ್ಕಾರ

7
ಪ್ರತಿಕೃತಿಗೆ ಅಗ್ನಿ ಸ್ಪರ್ಶ

ಶಾಸ್ತ್ರೋಕ್ತವಾಗಿ ಜಯಲಲಿತಾ ಅಂತ್ಯ ಸಂಸ್ಕಾರ

Published:
Updated:
ಶಾಸ್ತ್ರೋಕ್ತವಾಗಿ ಜಯಲಲಿತಾ ಅಂತ್ಯ ಸಂಸ್ಕಾರ

ಶ್ರೀರಂಗಪಟ್ಟಣ: ಪಶ್ಚಿಮ ವಾಹಿನಿಯಲ್ಲಿ ಮಂಗಳವಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ತಮಿಳುನಾಡಿನಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡದ ಹಿನ್ನೆಲೆಯಲ್ಲಿ ಜಯಲಲಿತಾ ಸಂಬಂಧಿ ವರದರಾಜನ್ ಅವರು ವೈಷ್ಣವ ಸಂಪ್ರದಾಯದಂತೆ ಸಂಸ್ಕಾರ ಮಾಡಿದರು.

ಜಯಾಲಲಿತಾ ಅವರ ಅಣ್ಣ ವಾಸುದೇವನ್ ಅನುಮತಿ ಹಿನ್ನೆಲೆಯಲ್ಲಿ ವರದರಾಜನ್ ನೇತೃತ್ವದಲ್ಲಿ ಮರು ಸಂಸ್ಕಾರ ನಡೆಯಿತು. ಅರ್ಚಕ ರಾಮಾನುಜಾ ಅಯ್ಯಂಗಾರ್, ರಂಗರಾಜ ಅಯ್ಯಂಗಾರ್ ನೇತೃತ್ವದಲ್ಲಿ ವಿಧಿವಿಧಾನ ನಡೆದಿದ್ದು, ದರ್ಬೆ ಹುಲ್ಲಿನಲ್ಲಿ ಜಯಲಲಿತಾ ಪ್ರತಿಕೃತಿ ಸಿದ್ಧಪಡಿಸಿ ಅಗ್ನಿ ಸ್ಪರ್ಶ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry