ಭಾನುವಾರ, ಮೇ 29, 2022
31 °C

ಗುಂಡಿಕ್ಕಿ ರಷ್ಯಾ ರಾಯಭಾರಿ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುಂಡಿಕ್ಕಿ ರಷ್ಯಾ ರಾಯಭಾರಿ ಹತ್ಯೆ

ಅಂಕಾರಾ (ಟರ್ಕಿ) :  ಅಂಕಾರಕ್ಕೆ ರಷ್ಯಾ ರಾಯಭಾರಿಯಾಗಿರುವ ಆಂಡ್ರ್ಯೂ ಕರ್ಲೋವ್‌ ಅವರನ್ನು ಅಂಗರಕ್ಷಕನೇ ಹತ್ಯೆ ಮಾಡಿರುವ ಘಟನೆ  ಸೋಮವಾರ ರಾತ್ರಿ ನಡೆದಿದೆ. 

ಇಲ್ಲಿನ ಕಲಾ ಗ್ಯಾಲರಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕರ್ಲೋವ್‌ ಮೇಲೆ ಈ ದಾಳಿ ನಡೆದಿದೆ.

ಅಂಗರಕ್ಷಕ ಗುಂಡು ಹಾರಿಸುತ್ತಿದ್ದಂತೆ ‘ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ’ ಎಂದು ಕೂಗಿಕೊಂಡ ಎಂದು ವರದಿಯಾಗಿದೆ.

‘ಗಾಯಗೊಂಡಿದ್ದ ಕರ್ಲೋವ್‌ ಅವರು ನಿಧನ ಹೊಂದಿದ್ದಾರೆ. ಇದನ್ನು ನಾವು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿದ್ದೇವೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.

ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.