ಗುಟೆರಸ್ ಅಧಿಕಾರ ಸ್ವೀಕಾರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಂಟೊನಿಯೊ ಗುಟೆರಸ್ ಅವರು ಹೊಸ ವರ್ಷದ ಮೊದಲ ದಿನವಾದ ಭಾನುವಾರ ಅಧಿಕಾರ ಸ್ವೀಕರಿಸಿದರು.
‘ಹೊಸ ವರ್ಷದ ಈ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜಗತ್ತಿನಾದ್ಯಂತ ಶಾಂತಿ ನೆಲೆಸಲು ಎಲ್ಲರೂ ನಿರ್ಣಯ ಕೈಗೊಳ್ಳಬೇಕು’ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಗುಟೆರಸ್ ಕರೆ ನೀಡಿದರು.
‘ಬಿಕ್ಕಟ್ಟು ಬಗೆಹರಿಸುವುದು ಮತ್ತು ಶಾಂತಿ ಸ್ಥಾಪಿಸಲು ಉತ್ತೇಜನ ನೀಡುವುದು ಮೊದಲ ಆದ್ಯತೆಯಾಗಿದೆ. ಆದರೆ ಈ ಕೆಲಸ ಬಲುದೊಡ್ಡ ಸವಾಲಿನಿಂದ ಕೂಡಿದೆ. ಶಾಂತಿ ನೆಲೆಸಲು ರಾಜತಾಂತ್ರಿಕ ಮಾರ್ಗವನ್ನು ಹೆಚ್ಚು ಅನುಸರಿಸಲಾಗುವುದು’ ಎಂದು ಅವರು ತಿಳಿಸಿದರು.
ಮುಂದಿನ ಐದು ವರ್ಷಗಳ ಅವಧಿಗೆ ಗುಟೆರಸ್ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಿರಿಯಾ, ಯೆಮನ್, ಲಿಬಿಯಾ, ದಕ್ಷಿಣ ಸುಡಾನ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟು ಬಗ್ಗೆ ಗುಟೆರಸ್ ಕೈಗೊಳ್ಳುವ ನಿರ್ಧಾರಗಳು ಮಹತ್ವ ಎನಿಸಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.