ಸಿಂಧು, ಸಮೀರ್‌ ಮುಡಿಗೆ ಪ್ರಶಸ್ತಿ

7
ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ

ಸಿಂಧು, ಸಮೀರ್‌ ಮುಡಿಗೆ ಪ್ರಶಸ್ತಿ

Published:
Updated:
ಸಿಂಧು, ಸಮೀರ್‌ ಮುಡಿಗೆ ಪ್ರಶಸ್ತಿ

ಲಖನೌ: ಭಾರತದ  ಪಿ.ವಿ ಸಿಂಧು ಮತ್ತು ಸಮೀರ್ ವರ್ಮಾ ಅವರು ವರ್ಷದ ಮೊದಲ ಮಹತ್ವದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಅವರು ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ.ಇಲ್ಲಿ ನಡೆದ ಒಟ್ಟು ಐದು ಸ್ಪರ್ಧೆಗಳಲ್ಲಿ ಭಾರತ  ಮೂರು ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಮಹಿ ಳಾ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಸಿಂಧು 21–13, 21–14ರಲ್ಲಿ  ಇಂಡೊನೇಷ್ಯಾದ ಗ್ರೆಗೊರಿಯಾ ಮರಿಸ್ಕಾ  ಅವರನ್ನು ಮಣಿಸಿದರು. ಮೊದಲ ಬಾರಿಗೆ ಇಲ್ಲಿ ಪ್ರಶಸ್ತಿ ಜಯಿಸಿದ ಸಿಂಧು ಈ ಸಾಧನೆ ಮಾಡಲು 30 ನಿಮಿಷ ತೆಗೆದುಕೊಂಡರು.2014ರ ಟೂರ್ನಿಯಲ್ಲಿ ಫೈನಲ್‌ ತಲುಪಿ ಸೈನಾ ನೆಹ್ವಾಲ್ ಎದುರು ಸೋತಿದ್ದರು. ಗ್ರೆಗೊರಿಯಾ ವಿರುದ್ಧ  ಭಾರತದ ಆಟಗಾರ್ತಿ ಎರಡೂ ಗೇಮ್‌ಗಳಲ್ಲಿ ಪ್ರಾ ಬಲ್ಯ ಮೆರೆದರು.ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸಮೀರ್‌ 21–19, 21–16ರಲ್ಲಿ ಭಾರತ ದವರೇ ಆದ ಸಾಯಿ ಪ್ರಣೀತ್ ಎದುರು ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು. ಸೆಮಿಫೈನಲ್‌ ನಲ್ಲಿ ಕೆ.ಶ್ರೀಕಾಂತ್‌ಗೆ ಆಘಾತ ನೀಡಿದ್ದ ಪ್ರಣೀತ್‌ ಮಹತ್ವದ ಘಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. ಬಲಗೈ ನೋವಿನಿಂದ ಬಳಲಿದ  ಪ್ರಣೀತ್‌ ಅನಗತ್ಯ ತಪ್ಪುಗಳನ್ನೇ ಹೆಚ್ಚು ಮಾಡಿದ್ದ ರಿಂದ ಸಮೀರ್ ಗೆಲುವಿನ ಹಾದಿ ಸುಗಮವಾಯಿತು.ಪ್ರಶಸ್ತಿ: ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್   ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ  ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಈ ಜೋಡಿ 22–20, 21–10ರಲ್ಲಿ ಆತಿಥೇಯ ದೇಶದ ವರೇ ಆದ  ಅಶ್ವಿನಿ ಪೊನ್ನಪ್ಪ ಹಾಗೂ ಬಿ. ಸುಮೀತ್ ರೆಡ್ಡಿ ಅವರನ್ನು ಮಣಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ   16–21, 18–21ರಲ್ಲಿ ಕಮಿಲಾ ಜುಹಲ್ ಮತ್ತು ಕ್ರಿಸ್ಟಿನಾ ಪೆಡರ್ಸನ್ ಎದುರು ನಿರಾಸೆ ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry