7

5 ನಿಮಿಷದಲ್ಲಿ ಬೆಳ್ಳುಳ್ಳಿ ಪಾಯಸ ಮಾಡಿ ಸವಿಯಿರಿ

Published:
Updated:
5 ನಿಮಿಷದಲ್ಲಿ ಬೆಳ್ಳುಳ್ಳಿ ಪಾಯಸ ಮಾಡಿ ಸವಿಯಿರಿ

ಸಾರಿನಲ್ಲಿ ಘಮ ಘಮಿಸುವ ಖಾರದ ಬೆಳ್ಳುಳ್ಳಿಯಲ್ಲಿ ಸಿಹಿಯಾದ ಪಾಯಸ ಮಾಡಬಹುದು! ಅದು ಕೇವಲ 5 ನಿಮಿಷದಲ್ಲಿ !  ತುಪ್ಪ, ಚಿರೋಟಿ ರವೆ, ಬೆಲ್ಲ ಹಾಕಿ ಮಾಡಿದ ಸ್ವಾದಿಷ್ಟ ಬೆಳ್ಳುಳ್ಳಿ ಪಾಯಸವನ್ನು ಸವಿಯುವುದೇ ಒಂದು ಚೆಂದ!

ಬೇಕಾಗುವ ಸಾಮಗ್ರಿಗಳು:

1. ಬೆಳ್ಳುಳ್ಳಿ ಎಸಳು      10

2. ಹಾಲು                 1.2 ಕಪ್

3. ಸ್ವಲ್ಪ ತುಪ್ಪ           2ಚಮಚ

4. ಬೆಲ್ಲದ ಪುಡಿ          1/4ಕಪ್

5. ಚಿರೋಟಿ ರವೆ        1ಚಮಚ

6. ಏಲಕ್ಕಿ ಪುಡಿ           ಸ್ವಲ್ಪ

ಮಾಡುವ ವಿಧಾನ: ಕುಕ್ಕರ್‍ನಲ್ಲ್ಲಿ ತುಪ್ಪ ಬಿಸಿ ಮಾಡಿ ಬೆಳ್ಳುಳ್ಳಿ ಎಸಳು  ಸೇರಿಸಿ ಘಮ ಬರುವವರೆಗೆ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಒಂದು ವಿಶಲ್ ಕೂಗಿಸಿ. ಬಾಂಡ್ಲಿಯಲ್ಲಿ ಸ್ವಲ್ಪ ತುಪ್ಪದಲ್ಲಿ ರವೆಯನ್ನು ಹುರಿಯಿರಿ. ಕುಕ್ಕರ್ ತಣ್ಣಗಾದ ನಂತರ ಹುರಿದ ರವೆಗೆ ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಐದು ನಿಮಿಷ ಕುದಿಸಿದರೆ ಬೆಳ್ಳುಳ್ಳಿ ಪಾಯಸ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry