ಭೂಮಿ ಸಮೀಪ ಹಾದು ಹೋಗಲಿದೆ ಬೃಹತ್‌ ಆಕಾಶಕಾಯ

7

ಭೂಮಿ ಸಮೀಪ ಹಾದು ಹೋಗಲಿದೆ ಬೃಹತ್‌ ಆಕಾಶಕಾಯ

Published:
Updated:
ಭೂಮಿ ಸಮೀಪ ಹಾದು ಹೋಗಲಿದೆ ಬೃಹತ್‌ ಆಕಾಶಕಾಯ

ವಾಷಿಂಗ್ಟನ್‌: ಸುಮಾರು 400 ಮೀಟರ್‌ನಷ್ಟು ದೊಡ್ಡದಾದ ‌ಆಕಾಶಕಾಯವೊಂದು ಬುಧವಾರ ಭೂಮಿಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯಿಂದ 18 ಲಕ್ಷ ಕಿ.ಮೀ. ದೂರದಲ್ಲಿ ಈ ಬೃಹತ್‌ ಆಕಾಶಕಾಯ ಹಾದು ಹೋಗಲಿದೆ. ಆದರೆ, ಇದರಿಂದ ಭೂಮಿಯ ಮೇಲೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಸಣ್ಣ ಸಣ್ಣ ಆಕಾಶಕಾಯಗಳು ಭೂಮಿಯ ಸಮೀಪ ಹಾದು ಹೋಗುತ್ತಿರುತ್ತವೆ. ಆದರೆ ‘2014 ಜೆ025’ ಹೆಸರಿನ ಆಕಾಶಕಾಯ ಬುಧವಾರ ಭೂಮಿಯ ಸಮೀಪ ಹಾದುಹೋಗಲಿದೆ. ಈ ಆಕಾಶಕಾಯವನ್ನು 2014ರ ಮೇ ತಿಂಗಳಲ್ಲಿ ಗುರುತಿಸಲಾಗಿತ್ತು.

2004ರ ನಂತರ ಇದೀಗ ಬೃಹತ್‌ ಗಾತ್ರದ ಆಕಾಶಕಾಯವೊಂದು ಭೂಮಿಯ ಸಮೀಪ ಹಾದು ಹೋಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬೃಹತ್‌ ಆಕಾಶಕಾಯಕ್ಕೆ ‘ದಿ ರಾಕ್‌’ ಎಂದು ಹೆಸರಿಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry