ಡಾ.ರಾಜ್‌ಕುಮಾರ್‌ಗೆ ಗೂಗಲ್‌ ಗೌರವ

ಬುಧವಾರ, ಜೂಲೈ 17, 2019
24 °C

ಡಾ.ರಾಜ್‌ಕುಮಾರ್‌ಗೆ ಗೂಗಲ್‌ ಗೌರವ

Published:
Updated:
ಡಾ.ರಾಜ್‌ಕುಮಾರ್‌ಗೆ ಗೂಗಲ್‌ ಗೌರವ

ಬೆಂಗಳೂರು:  ವರನಟ ಡಾ.ರಾಜ್‌ಕುಮಾರ್‌ ಅವರ 89ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಮೂಲಕ ಗೌರವ ಸೂಚಿಸಿದೆ.

ಏಪ್ರಿಲ್‌ 24ರಂದು ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಮುಖಪುಟದಲ್ಲಿ ರಾಜ್‌ ಅವರ ವರ್ಣಚಿತ್ರ ಪ್ರಕಟಿಸಿದೆ.

ತುಂಬಿರುವ ಚಿತ್ರಮಂದಿರ, ದೊಡ್ಡ ಪರದೆಯ ಮೇಲೆ ನಗೆ ಬೀರುತ್ತಿರುವ ರಾಜ್‌ಕುಮಾರ್ ಅವರ ವರ್ಣಚಿತ್ರ. ಅವರ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ಗೂಗಲ್‌ ಬಿತ್ತರಗೊಂಡಿದೆ.

ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು, ಶ್ರೇಷ್ಠ ನಾಯಕರು, ನಟರು ಸ್ಮರಣಾರ್ಥ ಹಾಗೂ ವಿಶೇಷ ದಿನಗಳಂದು ಗೂಗಲ್‌ ಡೂಡಲ್‌ನಲ್ಲಿ ಸೃಜನಾತ್ಮಕ ಚಿತ್ರಗಳನ್ನು ಪ್ರಕಟಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry