ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿರುವ ವಿಡಿಯೊ ಬಿಡುಗಡೆ ಮಾಡಿದ ಪಾಕ್

7

ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿರುವ ವಿಡಿಯೊ ಬಿಡುಗಡೆ ಮಾಡಿದ ಪಾಕ್

Published:
Updated:
ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿರುವ ವಿಡಿಯೊ ಬಿಡುಗಡೆ ಮಾಡಿದ ಪಾಕ್

ನವದೆಹಲಿ: ಭಾರತದ ಗಡಿ ನಿಯಂತ್ರಣಾ ರೇಖೆ ಬಳಿ ಶನಿವಾರ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ ಭಾರತದ ಐವರು ಯೋಧರನ್ನು ಹತ್ಯೆಗೈದಿರುವುದಾಗಿ ವಾದಿಸಿತ್ತು. ಈ ವಾದವನ್ನು ಭಾರತ ತಳ್ಳಿ ಹಾಕಿದೆ. ಇದರ ಬೆನ್ನಲ್ಲೇ ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ವಾದಿಸಿರುವ ಪಾಕ್,  ದಾಳಿಯ ವಿಡಿಯೊ ಬಹಿರಂಗ ಪಡಿಸಿದೆ.

ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಟ್ವಿಟರ್‍‍ನಲ್ಲಿ ಈ ವಿಡಿಯೊ ಟ್ವೀಟ್ ಮಾಡಿದ್ದಾರೆ.

ಭಾರತ ಪಾಕಿಸ್ತಾನದ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದಕ್ಕಾಗಿ ಭಾರತದ  ಸೇನಾ ಚೌಕಿಗಳ ಮೇಲೆ ಪ್ರತಿದಾಳಿ ನಡೆಸಿರುವ ವಿಡಿಯೊ ಇದು ಎಂದು ಗಫೂರ್ ಟ್ವೀಟ್ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ ಟಟ್ಟಾ ಪಾನಿ ವಲಯದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಸಿದೆ. ಈ ದಾಳಿಯಲ್ಲಿ ಭಾರತದ ಐವರು ಯೋಧರನ್ನು ಹತ್ಯೆ ಮಾಡಲಾಗಿದೆ ಮತ್ತು ಭಾರತೀಯ ಬಂಕರ್‍‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿತ್ತು.
 

[related]

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry