ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಪಾಕ್‌

7

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಪಾಕ್‌

Published:
Updated:
ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಪಾಕ್‌

ಲಂಡನ್‌: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡ ಫೀಲ್ಡಿಂಗ್‌ ಆಯ್ದುಕೊಂಡಿದೆ.

ಇದರಿಂದಾಗಿ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ  ಮತ್ತು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರಿಗೆ ಇದು ಅಗ್ನಿಪರೀಕ್ಷೆಯ ಪಂದ್ಯವಾಗಿದೆ.

ಎರಡೂ ದೇಶಗಳ ನಡುವಣ ಕ್ರಿಕೆಟ್‌ ಪಂದ್ಯವೆಂದರೆ ಅದು ಪ್ರತಿಷ್ಠೆಯ ಹಣಾಹಣಿ. ಉಭಯ ದೇಶಗಳ ಅಭಿಮಾನಿಗಳ ವಲಯದಲ್ಲಿ ವಿದ್ಯುತ್ ಸಂಚಾರವಾಗುವುದು ಖಚಿತ.  ಸೋತವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಗೆದ್ದವರು ಹೀರೊ ಪಟ್ಟ ಅಲಂಕರಿಸುತ್ತಾರೆ. ಆದ್ದರಿಂದ ಉಭಯ ತಂಡಗಳ ನಾಯಕರಿಗೂ ಇದು ಕಠಿಣ ಸವಾಲಿನ ಪಂದ್ಯ.

ಹೆಚ್ಚಿನ ಭದ್ರತೆ
ಲಂಡನ್‌ನಲ್ಲಿ ಶನಿವಾರ ಉಗ್ರರ ದಾಳಿ ನಡೆದಿರುವುದರಿಂದ ಎಜ್‌ಬಾಸ್ಟನ್ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಲಂಡನ್‌ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ...
ವಿರಾಟ್–ಸರ್ಫರಾಜ್‌ಗೆ ಅಗ್ನಿಪರೀಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry