ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‌ ಪ್ರಯಾಣಿಕರಿಗೆ ಸ್ನ್ಯಾಪ್‌ಚಾಟ್‌ ಸೇವೆ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಬೈ : ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಉಬರ್‌ ಸಂಸ್ಥೆಯು ಸಾಮಾಜಿಕ ಜಾಲತಾಣ ‘ಸ್ನ್ಯಾಪ್‌ಚಾಟ್‌’  ಜತೆ ಕೈಜೋಡಿಸಿದೆ.

ದೇಶದಲ್ಲಿ ಗುರುವಾರದಿಂದ  ಉಬರ್‌ ಪ್ರಯಾಣಿಕರಿಗೆ ‘ಸ್ನ್ಯಾಪ್‌ಚಾಟ್‌’  ಸೇವೆ ಲಭ್ಯವಾಗಲಿದೆ. ಉಬರ್‌ ಸೇವೆಯ ಬಗ್ಗೆ ಸ್ನ್ಯಾಪ್‌ಚಾಟ್‌ ನಿಖರ ಮಾಹಿತಿ ನೀಡಲಿದೆ.

ಎನ್ಐಐಟಿ ಸಿಇಒ
ನವದೆಹಲಿ:
ಸಾಫ್ಟ್‌ವೇರ್‌ ಸೇವೆ ಒದಗಿಸುವ ಎನ್‌ಐಐಟಿ ಟೆಕ್ನಾಲಜೀಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುಧೀರ್‌ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ.

ಸ್ಯಾಮ್ಸಂಗ್‌ ಕ್ಯುಎಲ್‌ಇಡಿ ಟಿ.ವಿ ಬಿಡುಗಡೆ
ಬೆಂಗಳೂರು:
ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಬುಧವಾರ ಬೆಂಗಳೂರು ಮಾರುಕಟ್ಟೆಗೆ ಕ್ಯುಎಲ್‌ಇಡಿ ಟಿ.ವಿ ಬಿಡುಗಡೆ ಮಾಡಿದೆ.
ಕಂಪೆನಿಯ ಎಲೆಕ್ಟ್ರಾನಿಕ್‌ ವಹಿವಾಟು ವಿಭಾಗದ ಉಪಾಧ್ಯಕ್ಷ ರಾಜೀವ್ ಭೂತಾನಿ ಮತ್ತು ಚಿತ್ರನಟಿ ಪ್ರಣೀತಾ ಸುಭಾಷ್‌  ಅವರು ಕ್ಯುಎಲ್‌ಇಡಿ ಟಿ.ವಿ  ಬಿಡುಗಡೆ ಮಾಡಿದರು.

ಬೆಲೆ: ₹ 3,14,900 ರಿಂದ ₹ 24,99,900

ಬಾಷ್‌ ಲಾಭ ಇಳಿಕೆ
ಬೆಂಗಳೂರು:
ವಾನಹಗಳ ಬಿಡಿಭಾಗ ತಯಾರಿಸುವ  ಬಾಷ್‌ ಕಂಪೆನಿಯು ನಾಲ್ಕನೇ ತ್ರೈಮಾಸಿಕದಲ್ಲಿ ₹440 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದ್ದ ₹491 ಕೋಟಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭ ಶೇ 19.22 ರಷ್ಟು ಇಳಿಕೆಯಾಗಿದೆ ಎಂದು ಕಂಪೆನಿ ನಿರ್ದೇಶಕ ಸುಮಿತ್ರ ಭಟ್ಟಾಚಾರ್ಯ  ತಿಳಿಸಿದ್ದಾರೆ.

ರಫ್ತು  ಇಳಿಕೆ ಕಂಡಿರುವುದರಿಂದ ನಿವ್ವಳ ಲಾಭ ತಗ್ಗಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟು ವರಮಾನಬ ₹2,695 ಕೋಟಿಗಳಿಂದ ₹2,780 ಕೋಟಿಗಳಿಗೆ ಶೇ 3.14 ರಷ್ಟು ಏರಿಕೆ ಕಂಡಿದೆ.2016–17ನೇ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ ₹90 ಲಾಭಾಂಶ ನೀಡಲು ಆಡಳಿತ ಮಂಡಳಿ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT