ರೋಗಿಗಳಿಗೆ ಸಿಗದ ಕೂಲರ್‌ ಭಾಗ್ಯ!

7

ರೋಗಿಗಳಿಗೆ ಸಿಗದ ಕೂಲರ್‌ ಭಾಗ್ಯ!

Published:
Updated:
ರೋಗಿಗಳಿಗೆ ಸಿಗದ ಕೂಲರ್‌ ಭಾಗ್ಯ!

ಲಖನೌ: ಯಾವಾಗಲೂ ಅವ್ಯವಸ್ಥೆಯ ಆಗರ, ಗಲೀಜಾಗಿರುವ ಅಲಹಾಬಾದ್‌ನ  ಸ್ವರೂಪ ರಾಣಿ ನೆಹರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗಾಗಿ ಏರ್‌ ಕೂಲರ್‌ಗಳನ್ನು ಇಡಲಾಗಿತ್ತು.

ವಾತಾವರಣದ ಉಷ್ಣತೆ 48 ಡಿಗ್ರಿ ಸೆಲ್ಸಿಯಸ್‌ ತಲುಪಿರುವ ಸಂದರ್ಭದಲ್ಲಿ ಇದೊಂದು ಭಾಗ್ಯದಂತೆ ಅವರಿಗೆ ಭಾಸವಾಗಿತ್ತು. ಆದರೆ, ಅದು ಸ್ವಲ್ಪ ಸಮಯದವರೆಗೆ ಮಾತ್ರ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ.

ವಾರ್ಡ್‌ಗಳಲ್ಲಿ ಅಳವಡಿಸಿರುವ ಏರ್‌ ಕೂಲರ್‌ ತಮಗಾಗಿ ಅಲ್ಲ; ಬದಲಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗಾಗಿ ಎಂಬುದು ರೋಗಿಗಳಿಗೆ ಗೊತ್ತಿರಲಿಲ್ಲ!

ಬಾಡಿಗೆಗೆ ಪಡೆದಿದ್ದ ಈ ಕೂಲರ್‌ಗಳನ್ನು ಆದಿತ್ಯನಾಥ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಿಂದಿರುಗಿದ ತಕ್ಷಣ  ತೆರವುಗೊಳಿಸಲಾಯಿತು!

ಈ ಪ್ರಕರಣ ಸಂಬಂಧ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಅಲಹಾಬಾದ್‌ ಪಟ್ಟಣಕ್ಕೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು  ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದರು.

ಮುಖ್ಯಮಂತ್ರಿಯವರನ್ನು ಖುಷಿ ಪಡಿಸುವುದಕ್ಕಾಗಿ ಆಸ್ಪತ್ರೆ ಆಡಳಿತ ಮಂಡಳಿ ಏರ್‌ ಕೂಲರ್‌ಗಳನ್ನು ವಾರ್ಡ್‌ಗಳಲ್ಲಿ ಇಟ್ಟಿತ್ತು.

ಅವುಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಯ ಹೆಸರು ಕಾಣಬಾರದು ಎಂಬ ಕಾರಣಕ್ಕೆ ಸ್ಟಿಕ್ಕರ್‌ ಅಂಟಿಸಲಾಗಿತ್ತು. ‘ಕಿರಿಯ ವೈದ್ಯರ ಒಕ್ಕೂಟ’ ಎಂಬ ಉಲ್ಲೇಖ ಆ ಸ್ಟಿಕ್ಕರ್‌ಗಳಲ್ಲಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry