ಆಟೊ ಸಂತೆಯಲ್ಲಿ...

7

ಆಟೊ ಸಂತೆಯಲ್ಲಿ...

Published:
Updated:
ಆಟೊ ಸಂತೆಯಲ್ಲಿ...

ಮಾರುಕಟ್ಟೆಗೆ ನಿಸ್ಸಾನ್‌ ಮೈಕ್ರಾ

ಹೊಸ ಸೌಲಭ್ಯಗಳೊಂದಿಗೆ ನಿಸ್ಸಾನ್ ಮೈಕ್ರಾ ಭಾರತದಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾಯಿತು. 2013ರಲ್ಲಿ ಫೇಸ್‌ಲಿಫ್ಟ್‌ ಆದ ನಿಸ್ಸಾನ್‌ ಮಾದರಿಯ ವಿನ್ಯಾಸವನ್ನೇ ಇದಕ್ಕೆ ಒಗ್ಗಿಸಿಕೊಂಡು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಆಟೊಮೆಟಿಕ್ ಹೆಡ್‌ಲ್ಯಾಂಪ್‌ಗಳೊಂದಿಗೆ ಫಾಲೊ ಮಿ ಫಂಕ್ಷನ್, ರೇನ್ ಸೆನ್ಸಿಂಗ್ ವೈಪರ್‌ಗಳು ಕಾರಿಗೆ ಇನ್ನಷ್ಟು ಮೆರುಗು ತಂದುಕೊಟ್ಟಿವೆ.

1.2 ಲೀಟರ್ ಮೂರು ಸಿಲಿಂಡರ್‌ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್‌ ಡೀಸೆಲ್ ಎಂಜಿನ್ ಒಳಗೊಂಡಿದೆ.

ಪೆಟ್ರೋಲ್ ಎಂಜಿನ್, 77 ಪಿಎಸ್‌ ಶಕ್ತಿ ಹಾಗೂ 104 ಎನ್‌ಎಂ ಟಾರ್ಕ್‌ ಉತ್ಪಾದಿಸಿದರೆ, ಡೀಸೆಲ್ ಎಂಜಿನ್, 64 ಪಿಎಸ್ ಹಾಗೂ 160 ಎನ್‌ಎಂ ಶಕ್ತಿ ಉತ್ಪಾದಿಸಲಿದೆ. ಡೀಸೆಲ್ ಎಂಜಿನ್‌ ಜೊತೆ 5 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಹಾಗೂ ಪೆಟ್ರೋಲ್‌ನಲ್ಲಿ ಸಿವಿಟಿ (ಕಂಟಿನ್ಯುಯಸ್ ವೇರಿಯಬಲ್ ಟ್ರಾನ್ಸ್‌ಮಿಷನ್) ಸೌಲಭ್ಯ ಇರಲಿದೆ.

ಇದರ ಆರು ಮಾದರಿಗಳ ಬೆಲೆ ₹ 5.99 ಲಕ್ಷದಿಂದ ಆರಂಭಗೊಂಡು ₹ 7.23 ರವರೆಗೂ (ಎಕ್ಸ್‌ ಶೋ ರೂಂ– ದೆಹಲಿ) ಇರಲಿದೆ.

****

ಟ್ರಂಫ್ 2017 ಸ್ಟ್ರೀಟ್‌ ತ್ರಿವಳಿ

ಟ್ರಂಫ್ ಮೋಟಾರ್ ಸೈಕಲ್ ಇಂಡಿಯಾ ತನ್ನ ತ್ರಿವಳಿ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ಜೂನ್‌ ಮಧ್ಯದಲ್ಲಿ ಈ ಬೈಕ್‌ಗಳು ಬಿಡುಗಡೆಗೊಳ್ಳುವ ಸೂಚನೆಯಿದೆ. ಮೂರು ಭಿನ್ನ ಮಾದರಿಯಲ್ಲಿ, ಸ್ಟ್ರೀಟ್ ಎಸ್, ಸ್ಟ್ರೀಟ್ ಆರ್ ಹಾಗೂ ಸ್ಟ್ರೀಟ್ ಆರ್‌ಎಸ್  ಬೈಕ್‌ಗಳು ಇರಲಿವೆ. ಮೊದಲು ಎಸ್  ಹಾಗೂ ಆರ್‌ ಮಾದರಿ ಬಿಡುಗಡೆಗೊಳ್ಳಲಿವೆ. 

ಎಸ್‌ ಮಾದರಿ–111ಬಿಎಚ್‌ಪಿ ಶಕ್ತಿ, ಆರ್‌–116 ಬಿಎಚ್‌ಪಿ ಹಾಗೂ ಆರ್ಎಸ್‌ 121 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಸ್ಟ್ರೀಟ್‌ ಟ್ರಿಪಲ್ ಎಸ್‌ನಲ್ಲಿ ರೇನ್‌ ಹಾಗೂ ರೋಡ್‌ ಎಂಬ ಎರಡು ರೈಡಿಂಗ್‌ ಮೋಡ್‌ಗಳನ್ನು ಅಳವಡಿಸಲಾಗಿದೆ. ಭಾರತದಲ್ಲಿ ಟ್ರಂಫ್ ಆರ್‌ಎಸ್‌ ಮಾದರಿಯನ್ನು ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲಿದೆ. ಇದರ ಬೆಲೆಯ ಕುರಿತು ಖಚಿತ ಮಾಹಿತಿ ತಿಳಿದುಬಂದಿಲ್ಲ.

****

ಸಿಂಕ್‌ ಬ್ರೇಕಿಂಗ್‌ ಸಿಸ್ಟಂ

ಟಿವಿಎಸ್ ಮೋಟಾರು ಕಂಪೆನಿ ತನ್ನ ಟಿವಿಎಸ್‌ ವೇಗೊ, ಟಿವಿಎಸ್ ಜುಪಿಟರ್ ಮಾದರಿಗಳಿಗೆ ‘ಸಿಂಕ್ ಬ್ರೇಕಿಂಗ್ ಸಿಸ್ಟಂ’ (ಎಸ್‌ಬಿಎಸ್) ತಂತ್ರಜ್ಞಾನವನ್ನು ಪರಿಚಯಿಸಿದೆ. ಭಾರತದ ರಸ್ತೆಗಳಲ್ಲಿ ಸುರಕ್ಷತೆಯನ್ನು ಮನಗಾಣಿಸಿಕೊಂಡು ಈ ತಂತ್ರಜ್ಞಾನವನ್ನು ಪರಿಚಯಿಸಿದೆಯಂತೆ.

ಈ ತಂತ್ರಜ್ಞಾನದಿಂದಾಗಿ ಸುಲಲಿತ ಚಾಲನೆಗೆ ಬ್ರೇಕಿಂಗ್ ನಿಯಂತ್ರಣ ಸಾಧ್ಯವಾಗಲಿದೆ. ಎರಡೂ ಚಕ್ರಗಳ ಸಮತೋಲನ ಇದರಿಂದ ಸುಲಭವಾಗಲಿದ್ದು, ಈ ಕಾರಣವಾಗಿ ಸುರಕ್ಷಿತವೂ ಆಗಿರುತ್ತದೆ. ಇದರಿಂದ ಟೈರ್‌ಗಳು ಹಾಗೂ ಬ್ರೇಕಿಂಗ್ ಲೈನ್‌ಗಳ ಬಾಳಿಕೆ ಚೆನ್ನಾಗಿರುತ್ತದೆ ಎಂದು ಹೇಳಿಕೊಂಡಿದೆ ಕಂಪೆನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry