ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 7 ಜೂನ್ 2017, 19:30 IST
ಅಕ್ಷರ ಗಾತ್ರ

ಬಿಬಿಎಂಪಿ ವ್ಯಾಪ್ತಿಯ ಜೆ.ಪಿ. ನಗರ 7, 8ನೇ ಹಂತಕ್ಕೆ ಸೇರಿದ ಬ್ರಿಗೇಡ್ ಮಿಲೆನಿಯಂ, ಪುಟ್ಟೇನಹಳ್ಳಿ, ಆರ್.ಬಿ.ಐ. ಲೇ ಔಟ್, ಸಂತೃಪ್ತಿನಗರ, ಗೌರವನಗರ, ನೃಪತುಂಗನಗರ, ಕೊತ್ತನೂರು ದಿಣ್ಣೆ, ವೆಂಕಟೇಶ್ವರ ಲೇ ಔಟ್, ಸುರಭಿನಗರ, ನಾಯಕ್ ಲೇ ಔಟ್, ಶ್ರೀಮಾತಾ ಲೇ ಔಟ್, ಜಂಬೂ ಸವಾರಿ ದಿಣ್ಣೆಯ ನಿವಾಸಿಗಳಿಗೆ ಗ್ರಂಥಾಲಯದ ಅವಶ್ಯಕತೆ ಇದೆ.

ಗ್ರಂಥಾಲಯಕ್ಕಾಗಿ ದೂರದ ಸೌತ್ ಎಂಡ್ ಸರ್ಕಲ್‌ಗೆ ಹೋಗಬೇಕಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ  ಗಮನಹರಿಸಿ ಸೂಕ್ತ ಸ್ಥಳದಲ್ಲಿ ಗ್ರಂಥಾಲಯಕ್ಕೆ ವ್ಯವಸ್ಥೆ ಮಾಡಬೇಕಾಗಿ  ಮನವಿ.
–ವಿ. ಹೇಮಂತಕುಮಾರ, ಜೆ.ಪಿ. ನಗರ, 8ನೇ ಹಂತ

ಮಳೆ ಬಂದರೆ ಕೆರೆ

ಹೆಣ್ಣೂರು ಕ್ರಾಸ್‌ನ ಕಾಲೇಜಿನ ಮುಂಭಾಗದಲ್ಲಿ ಮಳೆ ಬಂದಾಗ ಕೆರೆಯಂತೆ ನೀರು ನಿಲ್ಲುತ್ತದೆ. ಈ ಸಮಸ್ಯೆ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪರಿಹಾರ ಸಿಕ್ಕಿಲ್ಲ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕಾಗಿ ವಿನಂತಿ.
ಎಚ್.ವೆಂಕಟೇಶ್,ಹೆಣ್ಣೂರು

ನಾಯಿಗಳ ಕಾಟ ತಪ್ಪಿಸಿ 
ಯಲಹಂಕದ ಅಟ್ಟೂರು ಬಡಾವಣೆಯ ಪಕ್ಕದಲ್ಲಿನ ಸಂತೋಶನಗರ 6ನೇ ಕ್ರಾಸಿನಲ್ಲಿ ನಾಯಿಗಳ ಕಾಟ ವಿಪರೀತವಾಗಿದ್ದು ಮಕ್ಕಳು ವೃದ್ದರು ಓಡಾಡಲು ಕಷ್ಟವಾಗಿದೆ. ರಾತ್ರಿ ಮಲಗಲು ಸಹ ಆಗುತ್ತಿಲ್ಲ. ಬಿಬಿಎಂಪಿ ಯು ಇತ್ತ ಗಮನಹರಿಸಿ ಕ್ರಮವಹಿಸಲಿ
ಎಂ.ದೇವರಾಜು, ಸ್ಥಳೀಯ ನಿವಾಸಿ

ಹಿರಿಯರಿಗೆ ಸೀಟು ಕೊಡಿ
ಶ್ರೀನಗರದಿಂದ ಹನುಮಂತನಗರ, ಚಾಮರಾಜಪೇಟೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮತ್ತು ವಿದ್ಯಾರಣ್ಯಪುರಕ್ಕೆ ನಗರ ಸಾರಿಗೆ ಬಸ್‌ಗಳನ್ನು ಹಾಕಬೇಕೆಂದು ವಿನಂತಿ. ಹಿರಿಯ ನಾಗರಿಕರ ಸೀಟಿನಲ್ಲಿ ಹುಡುಗರು, ಹೆಂಗಸರು ಕುಳಿತಿರುತ್ತಾರೆ. ನಾವು ಕೇಳಿದರೆ ಅದಕ್ಕೆ ಸ್ವಂದಿಸುವುದಿಲ್ಲ. ಇದರ ಬಗ್ಗೆ ನಿರ್ವಾಹಕರು ಮತ್ತು ಚಾಲಕರು ತಲೆ ಕೆಡಿಸಿಕೊಳ್ಳುವುದಿಲ್ಲ.

ಇವುಗಳ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ (ಬಿಎಂಟಿಸಿ) ಮತ್ತು ನಿರ್ವಾಹಕ, ಚಾಲಕರಿಗೆ ಸೂಕ್ತ ಸಲಹೆ ಕೊಡಬೇಕೆಂದು ವಿನಂತಿಸುತ್ತೇನೆ.
– ಆರ್.ಎನ್. ಸುಬ್ಬರಾವ್, ಆರ್.ಆರ್. ನಗರ, ಬೆಂಗಳೂರು

ಕಾಂಕ್ರೀಟ್‌ ಮುಚ್ಚಳ ಸರಿಪಡಿಸಿ

ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ  ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗ, ಕಾಳಿಕಾನಗರದ ಪ್ರವೇಶ ದ್ವಾರದಲ್ಲಿ ಮೋರಿಗೆ ಹಾಕಿದ್ದ ಕಾಂಕ್ರೀಟ್ ಮುಚ್ಚಳ ಒಡೆದು ಹೋಗಿ ತಿಂಗಳುಗಳೇ ಆಗಿವೆ. ಇಲ್ಲಿ ಪ್ರತಿನಿತ್ಯ  ವಾಹನಗಳು ಮತ್ತು  ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ದಯಮಾಡಿ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು.
ಮಂಜುನಾಥ್ ಸಿ. ನೆಟ್ಕಲ್, ಕಾಳಿಕಾನಗರ.

ಕಸದಿಂದ ಮುಕ್ತಿ ಕೊಡಿ

ಗೋವಿಂದರಾಜು ನಗರದ ರಸ್ತೆಯಲ್ಲೇ ಕಸವನ್ನು ಸುರಿಯಲಾಗಿದೆ. ಇದರಿಂದ ವಾಹನಗಳು ಸಂಚರಿಸಲು ವಿಪರೀತ ಸಮಸ್ಯೆಯಾಗಿದೆ. ಕಸದ ವಾಸನೆಯಿಮದ ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡೆ ರಸ್ತೆಯಲ್ಲಿ ಸಂಚಿರಬೇಕಿದೆ. ದಯವಿಟ್ಟು ಸಂಬಂಧಪಟ್ಟವರು ಈ ಬಗ್ಗೆ ಗಮನವಹಿಸಬೇಕು ಎಂದು ಮನವಿ.
–ಗೋವಿಂದರಾಜನಗರ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT