17ತಿಂಗಳ ನಂತರ ಭೇಟಿಯಾದ ನರೇಂದ್ರ ಮೋದಿ–ನವಾಜ್‌ ಷರೀಫ್‌

7

17ತಿಂಗಳ ನಂತರ ಭೇಟಿಯಾದ ನರೇಂದ್ರ ಮೋದಿ–ನವಾಜ್‌ ಷರೀಫ್‌

Published:
Updated:
17ತಿಂಗಳ ನಂತರ ಭೇಟಿಯಾದ ನರೇಂದ್ರ ಮೋದಿ–ನವಾಜ್‌ ಷರೀಫ್‌

ಅಸ್ತಾನ(ಕಜಕಿಸ್ತಾನ): ಬರೋಬ್ಬರಿ 17ತಿಂಗಳ ನಂತರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಕಜಕಿಸ್ತಾನದ ರಾಜಧಾನಿ ಅಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ(ಎಸ್‌ಸಿಒ) ಶೃಂಗಸಭೆಗಾಗಿ ಆಗಮಿಸಿರುವ ಭಾರತ– ಪಾಕಿಸ್ತಾನ ಪ್ರಧಾನ ಮಂತ್ರಿಗಳು ಇಲ್ಲಿನ ಒಪೆರಾ ಹೌಸ್‌ನಲ್ಲಿ ಭೇಟಿಯಾಗಿದ್ದಾರೆ.

ಈ ಹಿಂದೆ ಮೋದಿ ಅವರು 2015ರ ಡಿಸೆಂಬರ್‌ನಲ್ಲಿ ಲಾಹೋರ್‌ಗೆ ದಿಢೀರ್‌ ಭೇಟಿ ನೀಡಿದ್ದ ವೇಳೆ ಷರೀಫ್‌ ಹಾಗೂ ಕುಟುಂಬದವರನ್ನು ಭೇಟಿ ಮಾಡಿದ್ದರು.

ಇದು ಉಭಯ ನಾಯಕರ 5ನೇ ಭೇಟಿಯಾಗಿದ್ದು, ಈ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಮೋದಿ ಅವರು ಷರೀಫ್ ಅವರ ಆರೋಗ್ಯ ಹಾಗೂ ಕುಟುಂಬದ ಬಗ್ಗೆ ವಿಚಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಷರೀಫ್‌ ಅವರು ಕಳೆದ ವರ್ಷ ಮೇ ತಿಂಗಳು ಲಂಡನ್‌ನಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ದೂರವಾಣಿ ಮೂಲಕ ಮಾತನಾಡಿದ್ದ ಭಾರತದ ಪ್ರಧಾನಿ ‘ಈದ್‌’ ಶುಭಾಶಯ ಕೋರುವ ಜತೆಗೆ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry