ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿಒ ಸದಸ್ಯತ್ವ ಪಡೆಯಲು ಸಹಕಾರ ನೀಡಿದ ಚೀನಾಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

Last Updated 9 ಜೂನ್ 2017, 6:34 IST
ಅಕ್ಷರ ಗಾತ್ರ

ಅಸ್ತಾನ(ಕಜಕಿಸ್ತಾನ): ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘ(ಎಸ್‌ಸಿಒ)ದ ಶೃಂಗಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಎಸ್‌ಸಿಒ ಸದಸ್ಯತ್ವ ದೊರೆಯಲು ಸಹಕಾರ ನೀಡಿದ ಚೀನಾ ಹಾಗೂ ಕಜಕಿಸ್ತಾನ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿ ಮಾಡಿದ ಮೋದಿ ಅವರು, ‘ಮತ್ತೊಮ್ಮೆ ಎಸ್‌ಸಿಒ ಶೃಂಗ ಸಭೆಯಲ್ಲಿ ತಮ್ಮನ್ನು ಭೇಟಿ ಮಾಡಿರುವುದು ಸಂತಸ ಮೂಡಿಸಿದೆ. ಎಸ್‌ಸಿಒ ಸದಸ್ಯತ್ವ ಪಡೆಯಲು ಭಾರತವನ್ನು ಬೆಂಬಲಿಸಿದ ತಮಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಈ ಮೂಲಕ ಭಾರತ ಎನ್‌ಎಸ್‌ಜಿ ರಾಷ್ಟ್ರಗಳ ಗುಂಪಿನಲ್ಲಿಯೂ ಸದಸ್ಯತ್ವ ಪಡೆಯಲು ಚೀನಾದ ಬೆಂಬಲವನ್ನು ಬಯಸುತ್ತಿದೆ.

ಈ ಹಿಂದೆ ಭಾರತ, ಚೀನಾ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಒನ್‌ ಬೆಲ್ಟ್‌ ಒನ್‌ ರೋಡ್‌(ಒಬಿಒಆರ್‌) ಆರ್ಥಿಕ ಯೋಜನೆಯ ಸಭೆಯನ್ನು ಬಹಿಷ್ಕರಿಸಿತ್ತು. ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಚೀನಾ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ.

ತನ್ನ ದೇಶದ ಬಲುಚಿಸ್ತಾನ ಹಾಗೂ ಗಿಲ್ಗೀಟ್‌ ಪ್ರದೇಶಗಳಲ್ಲಿ ಜಾರಿಯಾಗಲಿರುವ ಒಬಿಒಆರ್‌ ಯೋಜನೆಯನ್ನು ಭಾರತ ವಿರೋಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT