ಡ್ರಾ ಪಂದ್ಯದಲ್ಲಿ ಆನಂದ್‌

7

ಡ್ರಾ ಪಂದ್ಯದಲ್ಲಿ ಆನಂದ್‌

Published:
Updated:
ಡ್ರಾ ಪಂದ್ಯದಲ್ಲಿ ಆನಂದ್‌

ಸ್ಟಾವಂಜರ್‌ :  ಭಾರತದ ವಿಶ್ವ ನಾಥನ್ ಆನಂದ್ ಇಲ್ಲಿ ನಡೆಯುತ್ತಿ ರುವ ಅಲ್ಟಿಬಾಕ್ಸ್‌ ನಾರ್ವೆ ಚೆಸ್ ಟೂರ್ನಿ ಯಲ್ಲಿ ಸೋಮವಾರ ಡ್ರಾ ಮಾಡಿ ಕೊಂಡಿದ್ದಾರೆ. ಐದನೇ ಸುತ್ತಿನ ಪಂದ್ಯದಲ್ಲಿ ಆನಂದ್ ಅಮೆರಿಕದ ವೆಸ್ಲಿ ಸೊ ಅವ ರೊಂದಿಗೆ ಪಾಯಿಂಟ್ಸ್‌ ಹಂಚಿಕೊಂಡರು.

ಹತ್ತು ಆಟಗಾರರನ್ನು ಒಳಗೊಂಡ ರೌಂಡ್‌ ರಾಬಿನ್ ಮಾದರಿಯ ಟೂರ್ನಿ ಯಲ್ಲಿ ಆನಂದ್‌ 1.5 ಪಾಯಿಂಟ್ಸ್‌ ಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಉಳಿದ ನಾಲ್ಕೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು. ಮ್ಯಾಗ್ನಸ್ ಕಾರ್ಲ್‌ಸನ್‌ ಹಾಲೆಂಡ್‌ನ ಅನೀಶ್ ಗಿರಿ ಎದುರು ಡ್ರಾ ಮಾಡಿಕೊಂಡರು.

ರಷ್ಯಾದ ವ್ಲಾದಿಮಿರ್ ಕ್ರಾಮನಿಕ್ ಅಮೆರಿಕದ ಹಿಕಾರು ನಕಮುರಾ ಮೇಲೂ, ಲೆವೊನ್ ಅರೊನಿಯನ್ ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿರ್ ಲಾಗ್ರೇವ್‌ ವಿರುದ್ಧವೂ, ಅಮೆರಿಕದ ಫ್ಯಾಬಿಯಾನೊ ಕರುವಾನ ರಷ್ಯಾದ ಸರ್ಜಿ ಕರ್ಜಕಿನ್ ಎದುರೂ ಪಾಯಿಂಟ್ಸ್ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry