500 ವರ್ಷದ ಮರ
ಅಮೆರಿಕದ ಸೌಥ್ ಕ್ಯಾರೊಲಿನಾ ರಾಜ್ಯದ ಜಾನ್ಸ್ ಐಸ್‌ಲ್ಯಾಂಡ್‌ನ ಏಂಜಲ್ ಓಕ್ ಉದ್ಯಾನವದಲ್ಲಿರುವ ಓಕ್ ಮರ ಸುಮಾರು 500 ವರ್ಷಗಳಿಗೂ ಪುರಾತನವಾದುದ್ದು ಎನ್ನಲಾಗುತ್ತದೆ.

ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ಹಳೆಯ ಮರ ಎಂಬ ದಾಖಲೆಗೆ ಈ ಮರ ಪಾತ್ರವಾಗಿದೆ. ಕೆಲವು ಇತಿಹಾಸಕಾರರು 1717ರಲ್ಲಿ ಅಬ್ರಹಾಮ್ ವೈಟ್‌ಗೆ ದಾನವಾಗಿ ಬಂದ ಭೂಮಿಯಲ್ಲಿ ಈ ಮರ ಇತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಿರುವುದಾಗಿ ಹಾಗೂ ಈ ಮರದ ಆಯಸ್ಸು 1500 ವರ್ಷ ಎಂದು ವಾದಿಸುತ್ತಾರೆ. 63 ಅಡಿ ಉದ್ದವಿರುವ ಈ ಮರ 17,200 ಚದರಡಿ ಜಾಗಕ್ಕೆ ನೆರಳು ನೀಡುತ್ತಿದೆ.

ಈ ಮರವು ಭೂಕಂಪನ, ಚಂಡಮಾರುತ, ಪ್ರವಾಹ ಎಲ್ಲವನ್ನೂ ಎದುರಿಸಿ ಹಾಗೆಯೇ ನಿಂತಿದೆ.

‘ಬೇವಾಚ್’ ಬಾಲ್ ವಿಶ್ವ ದಾಖಲೆಗೆ

ಇತ್ತೀಚೆಗೆ ತೆರೆಕಂಡ ಹಾಲಿವುಡ್ ಸಿನಿಮಾ ‘ಬೇವಾಚ್’ ನೆನಪಿರಬೇಕಲ್ಲ. ಪ್ರಿಯಾಂಕಾ ಚೋಪ್ರಾ ನಟಿಸಿದ ಸಿನಿಮಾ. ಈಗ ಏಕೆ ಈ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ ಅಂದ್ಕೊಂಡ್ರಾ? ಅದಕ್ಕೆ ಕಾರಣ ಇಲ್ಲಿದೆ ನೋಡಿ...

ಈ ಸಿನಿಮಾ ನಿರ್ಮಿಸಿದ ಪ್ಯಾರಾಮೌಂಟ್ ಪಿಕ್ಚರ್ಸ್ ಲಂಡನ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಬೇವಾಚ್’ನ ಪೂರ್ವ ಪ್ರದರ್ಶನದ ವೇಳೆ ಥೇಮ್ಸ್ ನದಿಯಲ್ಲಿ ಬೋಟಿನ ಮೇಲೆ ಬಹುದೊಡ್ಡ ಬೀಚ್ ಬಾಲ್ ಅನ್ನು ಪ್ರದರ್ಶನಕ್ಕಿರಿಸಿತ್ತು. ಭಾರಿ ಜನಾಕರ್ಷಣೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದ್ದ ಈ ಬಾಲ್ ಈಗ ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅದೂ ಹಳೆಯ ದಾಖಲೆ ಮುರಿದು!

ಬೋಟ್‌ನ ಕೆಂಪು ಹಾಸಿನ ಮೇಲೆ 19.97 ಮೀಟರ್ ಅಳತೆಯ ಈ ಬಾಲ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಬೀಚ್ ಬಾಲ್ ತಯಾರಿಸುವ ಉತ್ಪನ್ನಗಳಿಂದಲೇ ಈ ಬಾಲ್ ತಯಾರಿಸಲಾಗಿತ್ತು. ಈ ಹಿಂದೆ 15.82 ಮೀಟರ್‌ನ ಬಾಲ್ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿತ್ತು. ಇದೀಗ ‘ಬೇವಾಚ್’ ಬಾಲ್ ಈ ದಾಖಲೆಯನ್ನು ಮುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.