ಉದ್ದವ್‌ ಠಾಕ್ರೆ ಭೇಟಿ ಮಾಡಿದ ಅಮಿತ್‌ ಷಾ

7

ಉದ್ದವ್‌ ಠಾಕ್ರೆ ಭೇಟಿ ಮಾಡಿದ ಅಮಿತ್‌ ಷಾ

Published:
Updated:
ಉದ್ದವ್‌ ಠಾಕ್ರೆ ಭೇಟಿ ಮಾಡಿದ ಅಮಿತ್‌ ಷಾ

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಅವರನ್ನು ಬಾಂದ್ರಾದ ಉಪನಗರದಲ್ಲಿ ನಿವಾಸದಲ್ಲಿ ಭಾನುವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಭೇಟಿ ಮಾಡಿದ್ದಾರೆ.

ಅಮಿತ್‌ ಷಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೊಂದಿಗೆ ಠಾಕ್ರೆ ಅವರ ‘ಮಾತೋಶ್ರೀ‘ ನಿವಾಸಕ್ಕೆ ಭೇಟಿ ಮಾಡಿದ್ದಾರೆ.

ಬೆಳಿಗ್ಗೆ 10ಕ್ಕೆ ಠಾಕ್ರೆ ಅವರ ನಿವಾಸದಲ್ಲಿ ಆರಂಭವಾದ ಸಭೆ ಸುಮಾರು 70 ನಿಮಿಷ ಕಾಲ ನಡೆದಿದೆ.

ಎನ್‌ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮ ಗೊಳಿಸುವ ಮುನ್ನ ತನ್ನ ಮೈತ್ರಿಕೂಟವನ್ನು ಬಲಪಡಿಸುವಲ್ಲಿ ತೊಡಗಿದ್ದು, ಈ ನಿಟ್ಟಿಲ್ಲಿ ಅಮಿತ್‌ ಷಾ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆ ನಿಮಿತ್ತ ಮೂರು ದಿನಗಳ ಭೇಟಿಗೆ ಆಗಮಿಸಿದ್ದಾರೆ.

ಅಮಿತ್ ಷಾ ಅವರು ಉದ್ದವ್‌ ಠಾಕ್ರೆ ಅವರನ್ನು ಭೇಟಿ ಮಾಡಿರುವುದು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry