ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್

7

ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್

Published:
Updated:
ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್

ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವಣ ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಆಸಕ್ತಿ ತೋರಿದ್ದಾರೆ.

‘ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿರುವುದು ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಹೆಚ್ಚಳವಾಗುತ್ತಿರುವುದಕ್ಕೆ ಸಾಕ್ಷಿ. ಅಲ್ಲದೆ, ಅಮೆರಿಕವು ಭಾರತವನ್ನು ತನ್ನ ದೊಡ್ಡ ರಕ್ಷಣಾ ಪಾಲುದಾರ ಎಂದು ಪರಿಗಣಿಸಿರುವುದನ್ನು ಇದು ಪ್ರತಿಬಿಂಬಿಸುತ್ತದೆ’ ಎಂದು ಮೋದಿ ಮತ್ತು ಟ್ರಂಪ್ ಅವರ ಜಂಟಿ ಹೇಳಿಕೆಯಲ್ಲಿ ವಿವರಿಸಲಾಗಿದೆ.

‘ಎರಡೂ ದೇಶಗಳ ನಡುವೆ ಶಸ್ತ್ರಾಸ್ತ್ರ ತಂತ್ರಜ್ಞಾನ ಹಂಚಿಕೆ, ತಯಾರಿಕೆ ಸೇರಿ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಇಬ್ಬರೂ ಚರ್ಚಿಸಿದ್ದೇವೆ. ಇದರಿಂದ ಎರಡೂ ರಾಷ್ಟ್ರಗಳಿಗೆ ಅನುಕೂಲವಾಗಲಿದೆ. ಇವುಗಳ ಜತೆಗೆ, ಕೆಲವು ಅಂತರರಾಷ್ಟ್ರೀಯ ಸಮಸ್ಯೆಗಳು ಹಾಗೂ ನಮ್ಮ ಹಿತಾಸಕ್ತಿಗಳ ಬಗ್ಗೆಯೂ ಮಾತನಾಡಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

ಭಾರತ ಆಯೋಜಿಸಲಿರುವ ‘ಮಲಬಾರ್’ ಸಮರಾಭ್ಯಾಸಕ್ಕೆ ಮೋದಿ ಅವರು ಅಮೆರಿಕವನ್ನು ಆಹ್ವಾನಿಸಿರುವುದನ್ನು ಟ್ರಂಪ್‌ ಸ್ವಾಗತಿಸಿದ್ದಾರೆ. ಈ ಸಮರಾಭ್ಯಾಸದಲ್ಲಿ ಭಾರತ, ಅಮೆರಿಕ ಮತ್ತು ಜಪಾನ್‌ನ ನೌಕಾಪಡೆಗಳು ಭಾಗವಹಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry