ಭಾನುವಾರ, ಡಿಸೆಂಬರ್ 15, 2019
21 °C

ಪ್ರಪಂಚ: ಎಷ್ಟು ಪರಿಚಿತ?

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಪ್ರಪಂಚ: ಎಷ್ಟು ಪರಿಚಿತ?

1.ನಮ್ಮ ಪೃಥ್ವಿಯನ್ನು ಅಪ್ಪಿ ಆವರಿಸಿರುವ ವಾಯುಮಂಡಲದಲ್ಲಿ ಒಡಮೂಡುವ ಮೋಡ ವಿಧಗಳು ಹಲವಾರು. ಹೌದಲ್ಲ? ಅಂತಹ ದ್ವಿವಿಧ ಮೋಡಗಳು ಚಿತ್ರ-1 ಮತ್ತು ಚಿತ್ರ-2ರಲ್ಲಿವೆ. ಆಗಸದಲ್ಲಿ ಹಾಗೆ ಮೈದಳೆವ ಎಲ್ಲ ವಿಧಗಳ ಮೋಡಗಳನ್ನೂ ಹೆಸರಿಸಲಾಗಿದೆ ಮತ್ತು ವೈಜ್ಞಾನಿಕವಾಗಿ ವರ್ಗೀಕರಿಸಲಾಗಿದೆ ಕೂಡ. ಮೋಡಗಳ ನಾಮಕರಣ ಮತ್ತು ವರ್ಗೀಕರಣ ಈ ಕೆಳಗಿನ ಯಾವ ಯಾವ ಅಂಶಗಳನ್ನು ಅವಲಂಬಿಸಿವೆ ಗೊತ್ತೇ?

ಅ. ಮೋಡದ ಗಾತ್ರ

ಬ. ಮೋಡದ ಆಕಾರ- ಸ್ವರೂಪ

ಕ. ಮೋಡದ ಬಣ್ಣ

ಡ. ನೆಲದಿಂದ ಮೋಡಕ್ಕಿರುವ ಎತ್ತರ

ಇ. ಮೋಡ ತೇಲುತ್ತಿರುವ ವೇಗ

ಈ. ಮೋಡದಲ್ಲಿರುವ ತೇವಾಂಶದ ಪ್ರಮಾಣ2.ಜ್ವಾಲಾಮುಖಿಗಳಿಂದ ಉಕ್ಕಿ ಹರಿದು ಹರಡಿ ತಣ್ಣಗಾಗುವ ಶಿಲಾಪಾಕದಿಂದ ಅಗ್ನಿ ಶಿಲೆಗಳು ರೂಪುಗೊಳ್ಳುತ್ತವೆ- ಸರಿ ತಾನೇ? ನಿರ್ದಿಷ್ಟ ಸಂಯೋಜನೆಯ, ನಿರ್ದಿಷ್ಟ ಸಾಂದ್ರತೆಯ ಶಿಲಾಪಾಕದಿಂದ ಮೈದಳೆವ ‘ಸ್ತಂಭಗಳ ರೂಪ’ದ ಸುಪ್ರಸಿದ್ಧ ಅಗ್ನಿಶಿಲಾವಿಧ ಚಿತ್ರ-3 ರಲ್ಲಿದೆ. ಯಾವುದು ಈ ಅಗ್ನಿಶಿಲೆ?

ಅ. ಗ್ರಾನೈಟ್

ಬ. ಸಯನೈಟ್

ಕ. ಗ್ಯಾಬ್ರೋ

ಡ. ಬಸಾಲ್ಟ್

3. ಆಫ್ರಿಕ ಖಂಡದ ಜ಼ಾಂಬಿಯಾ ದೇಶದ ವಿಶ್ವ ಪ್ರಸಿದ್ಧ ‘ವಿಕ್ಟೋರಿಯಾ ಜಲಪಾತ’ದ ಒಂದು ದೃಶ್ಯ ಚಿತ್ರ-4 ರಲ್ಲಿದೆ. ಈ ಜಲಪಾತದ ವಿಶ್ವ ವಿಕ್ರಮ ಏನು?

ಅ. ಅದು ಅತ್ಯಂತ ಎತ್ತರದ ಜಲಪಾತ

ಬ. ಅದು ಅತ್ಯಂತ ಅಗಲವಾದ ಜಲಪಾತ

ಕ. ಅದು ಅತ್ಯಂತ ಹೆಚ್ಚು ನೀರು ಹರಿವ ಜಲಪಾತ

ಡ. ಅದು ಅತ್ಯಂತ ಹೆಚ್ಚು ಸಪ್ಪಳ ಮಾಡುವ ಜಲಪಾತ

4.ಸಾಗರಾವಾರದ ಕೆಲ ಪ್ರದೇಶಗಳಲ್ಲಿ ಬೆಳೆದು ಹರಡಿರುವ ‘ಹವಳ ಸಾಮ್ರಾಜ್ಯ’ದ ಒಂದು ದೃಶ್ಯ ಚಿತ್ರ-5 ರಲ್ಲಿದೆ. ಪರಿಸರ ತಜ್ಞರು ಹವಳ ಲೋಕಗಳನ್ನು ನೆಲಾವಾರದ ‘ವೃಷ್ಟಿ ವನ’ಗಳಿಗೆ ಹೋಲಿಸುತ್ತಾರೆ. ಅದಕ್ಕೆ ಕಾರಣ ಇವುಗಳಲ್ಲಿ ಯಾವುದು?

ಅ. ವೃಷ್ಟಿ ವನಗಳಂತೆಯೇ ಹವಳ ಲೋಕಗಳೂ ಕುಗ್ಗುತ್ತಿವೆ

ಬ. ವೃಷ್ಟಿ ವನಗಳಂತೆಯೇ ಹವಳ ಲೋಕಗಳೂ ಸಮಭಾಜಕದ ಸನಿಹಗಳಲ್ಲೇ ಹರಡಿವೆ

ಕ. ಹವಳ ಲೋಕಗಳಲ್ಲಿನ ಜೀವಿ ದಟ್ಟಣೆ ಮತ್ತು ವೈವಿಧ್ಯ ವೃಷ್ಟಿ ವನಗಳಲ್ಲಿರುವಂತೆಯೇ ಬಹು ನಿಬಿಡವಾಗಿವೆ

ಡ. ಹವಳ ಲೋಕಗಳಲ್ಲಿರುವ ಜೀವಿಗಳೇ ವೃಷ್ಟಿ ವನಗಳಲ್ಲೂ ಇವೆ5.ಸ್ವಚ್ಛ ಬಿಳುಪಿನ ವರ್ಣದ ಮರಳ ತೀರವೊಂದರ ದೃಶ್ಯ ಚಿತ್ರ-6 ರಲ್ಲಿದೆ. ಕಡಲ ತೀರದ ಕೆಲ ಪ್ರದೇಶಗಳಲ್ಲಿ ಕಾಣ ಸಿಗುವ ಇಂತಹ ಬೆಳ್ಳನ್ನ ಮರಳ ರಾಶಿಗಳನ್ನು ರೂಪಿಸುವ ಪ್ರಮುಖ ವಸ್ತು ಇವುಗಳಲ್ಲಿ ಯಾವುದು?

ಅ. ಕ್ವಾರ್ಟ್ಜ್ ಖನಿಜ

ಬ. ಕಡಲ ಪ್ರಾಣಿಗಳ ಮೂಳೆ ತುಣುಕುಗಳು

ಕ. ಸುಣ್ಣದ ಶಿಲೆಗಳ ಪುಡಿ

ಡ. ಮೃದ್ವಂಗಿ ಚಿಪ್ಪುಗಳ ಚೂರು-ಪುಡಿ6.ಆಕಾಶದಿಂದ ಕಾಣುವಂತೆ ನಿಸರ್ಗದಲ್ಲಿನ ವಿಶಿಷ್ಟ ನೋಟವೊಂದು ಚಿತ್ರ-7 ರಲ್ಲಿದೆ. ಈ ದೃಶ್ಯ ಏನೆಂದು ಗುರುತಿಸಬಲ್ಲಿರಾ?

ಅ. ದಟ್ಟಡವಿಯ ನಡುವೆ ಪ್ರವಹಿಸುತ್ತಿರುವ ನದಿ

ಬ. ಕಾನನದಲ್ಲಿ ನಿರ್ಮಿಸಿರುವ ದೀರ್ಘ ಹೆದ್ದಾರಿ

ಕ. ಹುಲ್ಲು ಬಯಲಲ್ಲಿ ಮೈ ಚೆಲ್ಲಿ ಮಲಗಿರುವ ಭಾರೀ ಸರ್ಪಗಳು

ಡ. ಅಡವಿಯಲ್ಲಿ ಪಿಡುಗಿನ ಹಾವಳಿಯಿಂದ ಮೃತವಾಗಿರುವ ವೃಕ್ಷಗಳ ಸಾಲು7.ಕಡಲಿನಲ್ಲಿ ಕೆಲ ಬಾರಿ ಒಡಮೂಡುವ ಅತ್ಯಂತ ವಿಸ್ಮಯದ, ವಿನಾಶಕಾರಿಯೂ ಆದ ‘ನೀರಿನ ಸುಳಿ’ ಯ ದೃಶ್ಯ ಚಿತ್ರ-8 ರಲ್ಲಿದೆ. ಈ ವಿದ್ಯಮಾನಕ್ಕೆ ಕಾರಣ?

ಅ. ಕಡಲ ಮೇಲಿನ ಸುಂಟರ ಗಾಳಿ

ಬ. ಚಂಡಮಾರುತ

ಕ. ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ವೇಗವಾಗಿ ಬಂದು ಸಂಧಿಸುವ ಭಾರೀ ಜಲ ಪ್ರವಾಹಗಳು

ಡ. ಭೂಮಿಯನಿರಂತರ ಸ್ವಭ್ರಮಣ

8.ಚಿತ್ರ-9 ರಲ್ಲಿರುವ ಚಿತ್ರ ಸರಣಿಯನ್ನು ಗಮನಿಸಿ. ಭೂ ನೆಲದ ಯಾವ ಸಂಪನ್ಮೂಲ ರೂಪುಗೊಳ್ಳುವ ಕ್ರಮ ಮತ್ತು ಹಂತಗಳನ್ನು ಈ ಚಿತ್ರ ಸರಣಿ ನಿರೂಪಿಸುತ್ತಿದೆ?

ಅ. ಪೆಟ್ರೋಲಿಯಂ

ಬ. ನೈಸರ್ಗಿಕ ಅನಿಲ

ಕ. ಕಲ್ಲಿದ್ದಲು

ಡ. ಸಸ್ಯ ರಾಳ (ಆಂಬರ್ )

9.ಭೀಕರ ಕಾಳ್ಗಿಚ್ಚಿನ ಒಂದು ಭಯಾನಕ ದೃಶ್ಯ ಚಿತ್ರ-10 ರಲ್ಲಿದೆ. ಕಾಳ್ಗಿಚ್ಚುಗಳಿಗೆ ಅತ್ಯಂತ ಮುಖ್ಯ ನೈಸರ್ಗಿಕ ಕಾರಣ ಇವುಗಳಲ್ಲಿ ಯಾವುದು?

ಅ. ಮಿಂಚು

ಬ. ತೀವ್ರ ಬಿಸಿಲು

ಕ. ಭೂಕಂಪನ

ಡ. ಜ್ವಾಲಾಮುಖಿ ಸ್ಫೋಟ10.ಗಿಡ-ಮರಗಳು ಕಿಂಚಿತ್ತೂ ಬೆಳೆಯದಂತಾಗಿರುವ ‘ಬಂಜರು ನೆಲ’ದ ದೃಶ್ಯವೊಂದು ಚಿತ್ರ-11 ರಲ್ಲಿದೆ. ಭೂ ಪ್ರದೇಶವೊಂದು ಹೀಗೆ ಬಂಜರಾಗಲು ಮುಖ್ಯ ಕಾರಣ ಏನು?

ಅ. ಮಳೆ ಕೊರತೆ

ಬ. ಮಣ್ಣಿನಲ್ಲಿ ಸಸ್ಯ ಪೋಷಕಾಂಶಗಳ ನಾಸ್ತಿತ್ವ

ಕ. ವಿಪರೀತ ಬಿಸಿಲು

ಡ. ಮಣ್ಣಿನ ಸಂಪೂರ್ಣ ಸವಕಳಿ

11.ಮೃತ ಜ್ವಾಲಾಮುಖಿಯೊಂದರ ದೃಶ್ಯ ಚಿತ್ರ-12 ರಲ್ಲಿದೆ. ಜ್ವಾಲಾಮುಖಿಯೊಂದನ್ನು ‘ಮೃತ’ ಎಂದು ವರ್ಗೀಕರಿಸಲು ಅದು ಕನಿಷ್ಠ ಎಷ್ಟು ಕಾಲ ನಿಷ್ಕ್ರಿಯವಾಗಿರಬೇಕು?

ಅ. 25,000 ವರ್ಷ

ಬ. 10,000 ವರ್ಷ

ಕ. 4,000 ವರ್ಷ

ಡ. 5,00 ವರ್ಷ12.ಯು.ಎಸ್.ಎ ದೇಶದ ಪ್ರಸಿದ್ಧ ‘ನ್ಯೂಯಾರ್ಕ್’ ನಗರದ ಒಂದು ಚಿತ್ರ ಇಲ್ಲಿದೆ ( ಚಿತ್ರ-13). ಈ ಕೆಳಗೆ ಪಟ್ಟಿ ಮಾಡಿರುವ ಪ್ರಸಿದ್ಧ ನಗರಗಳು ಮತ್ತುರಾಷ್ಟ್ರಗಳನ್ನು ಸರಿಹೊಂದಿಸಿ:

1. ಮನಿಲ ಅ. ದಕ್ಷಿಣ ಕೊರಿಯ

2. ಶಾಂಘಾಯ್ ಬ. ಬ್ರೆಜ಼ಿಲ್

3. ಸಾವೋ ಪಾಲೋ ಕ. ಚೈನಾ

4. ಒಸಾಕ ಡ. ಫಿಲಿಪ್ಪೀನ್ಸ್

5. ಸಿಯೋಲ್ ಇ. ಜಪಾನ್

13.ಚಿತ್ರ-14 ರಲ್ಲಿರುವ ಪುರಾತನ ಕಾಲದ ಬೃಹದಾಕಾರದ ವಾಸ್ತು ಶಿಲ್ಪವನ್ನು ಗಮನಿಸಿ. ಕೋಟೆ- ಕೊತ್ತಲ- ಕಂದಕ ಸಹಿತ ನಿರ್ಮಾಣಗೊಳ್ಳುತ್ತಿದ್ದ ಈ ಬಗೆಯ ವಿಶಿಷ್ಟ ಕಟ್ಟಡಗಳ ಹೆಸರೇನು ?

ಅ. ಮೇನ್ಷನ್

ಬ. ಪ್ಯಾಲೇಸ್

ಕ. ಷಟಾವ್

ಡ. ಕ್ಯಾಸಲ್

ಉತ್ತರಗಳು :

1. ಬ - ಮೋಡದ ಆಕಾರ ಮತ್ತು ಸ್ವರೂಪ

ಡ - ಮೋಡದ ಎತ್ತರ

2. ಡ - ಬಸಾಲ್ಟ್

3. ಬ - ಅತ್ಯಂತ ಅಗಲವಾದ ಜಲಪಾತ

4. ಕ - ವೃಷ್ಟಿ ವನ ಸದೃಶ ಜೀವಿ ವೈವಿಧ್ಯ ಮತ್ತು ದಟ್ಟಣೆ

5. ಡ - ಮೃದ್ವಂಗಿ ಚಿಪ್ಪುಗಳ ಪುಡಿ

6. ಅ - ದಟ್ಟಡವಿಯ ನಡುವೆ ಪ್ರವಹಿಸುತ್ತಿರುವ ನದಿ

7. ಕ - ವಿರುದ್ಧ ದಿಕ್ಕಿನ ಜಲ ಪ್ರವಾಹಗಳು

8. ಕ - ಕಲ್ಲಿದ್ದಲು

9. ಅ - ಮಿಂಚು

10. ಡ - ಮಣ್ಣಿನ ಸವಕಳಿ

11. ಬ - 10,000 ವರ್ಷ

12. 1 - ಡ ; 2 - ಕ ; 3 - ಬ ; 4 - ಇ ; 5 - ಅ

13. ಡ - ಕ್ಯಾಸಲ್

ಪ್ರತಿಕ್ರಿಯಿಸಿ (+)