ವಿಧಾನಸಭೆಯ ಕಾರ್ಯವೈಖರಿ ಹೇಗೆ?

7

ವಿಧಾನಸಭೆಯ ಕಾರ್ಯವೈಖರಿ ಹೇಗೆ?

Published:
Updated:

ಸಂವಿಧಾನದ 170ನೇ ವಿಧಿಯ ಅನ್ವಯ ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ನೇರ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯು ತ್ತದೆ. ಒಂದು ವಿಧಾನಸಭೆಯಲ್ಲಿ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯರು ಇರಬೇಕು. ಚುನಾವಣಾ ಕ್ಷೇತ್ರವನ್ನು ಹೇಗೆ ವಿಭಾಗ ಮಾಡಬೇಕು ಎಂಬ ಬಗ್ಗೆ 170(2)(1)ನೇ ವಿಧಿಯಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಚುನಾವಣಾ ಕ್ಷೇತ್ರದಲ್ಲಿ ಇರುವ ಜನಸಂಖ್ಯೆ ಮತ್ತು ಆ ಕ್ಷೇತ್ರದಲ್ಲಿ ಮೀಸಲು ಇರುವ ಸ್ಥಾನಗಳ ಸಂಖ್ಯೆ ಇವೆರಡರ ನಡುವಿನ ಅನುಪಾತವು ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಾದ್ಯಂತ ಒಂದೇ ರೀತಿ ಆಗಿರಬೇಕು. ಹಿಂದಿನ ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಮಾನದಂಡವನ್ನು ಇಟ್ಟು ಕೊಳ್ಳಬೇಕು. (10 ವರ್ಷಕ್ಕೊಮ್ಮೆ ನಡೆಯುವ) ಜನಗಣತಿಯು ಪೂರ್ಣಗೊಂಡ ಮೇಲೆ, ಪ್ರತಿಯೊಂದು ರಾಜ್ಯದ ವಿಧಾನ­ಸಭೆಯಲ್ಲಿನ ಒಟ್ಟು ಸ್ಥಾನಗಳ ಆಧಾರದ ಮೇಲೆ ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಿರುವ ಬಗ್ಗೆ ಸಂಸತ್ತು ನಿರ್ಧರಿಸಬೇಕು. ಈ ಸಂಬಂಧ ಒಂದು ಪ್ರಾಧಿಕಾರವನ್ನು ರೂಪಿಸಬೇಕು. ಆ ಪ್ರಕ್ರಿಯೆ ಮುಗಿಯುವವರಿಗೆ ಅಸ್ತಿತ್ವದಲ್ಲಿ ಇರುವ ವಿಧಾನಸಭೆಯು ಕಾರ್ಯ ಮುಂದುವರಿಸಬೇಕು. ಆ ನಂತರವಷ್ಟೇ ವಿಧಾನಸಭೆಯ ವಿಸರ್ಜನೆ ಮಾಡಬೇಕು. ರಾಷ್ಟ್ರಪತಿಯವರ ಅನುಮತಿಯ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು.  ಈ ಮಧ್ಯೆ, ಚುನಾವಣೆ ಏನಾದರೂ ನಡೆದರೆ, ಅಸ್ತಿತ್ವದಲ್ಲಿರುವ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಆಧಾರದ ಮೇಲೆಯೇ ನಡೆಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry