ಭಾನುವಾರ, ಡಿಸೆಂಬರ್ 8, 2019
23 °C
ಮಹಿಳಾ ವಿಶ್ವಕಪ್‌: ಪಾಕಿಸ್ತಾನದ ವಿರುದ್ಧ ಇಂದು ಹೋರಾಟ

ಭಾರತಕ್ಕೆ ಹ್ಯಾಟ್ರಿಕ್‌ ಜಯದ ತವಕ

Published:
Updated:
ಭಾರತಕ್ಕೆ ಹ್ಯಾಟ್ರಿಕ್‌ ಜಯದ ತವಕ

ಡರ್ಬಿ: ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವಿನ ಸಿಹಿ ಸವಿದು ವಿಶ್ವಾಸದಿಂದ ಬೀಗುತ್ತಿರುವ ಭಾರತದ ವನಿತೆಯರ ತಂಡದವರು ವಿಶ್ವಕಪ್‌ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ಜಯದ ಕನವರಿಕೆಯಲ್ಲಿದ್ದಾರೆ.

ಭಾನುವಾರ ನಡೆಯುವ ತನ್ನ ಮೂರನೇ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿ ಸ್ತಾನದ ವಿರುದ್ಧ ಸೆಣಸಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಆತಿ ಥೇಯ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳನ್ನು ಸೋಲಿಸಿರುವ ಮಿಥಾಲಿ ರಾಜ್‌ ಬಳಗ  ಪಾಕಿಸ್ತಾನದ ವಿರುದ್ಧವೂ ಸುಲಭ ಗೆಲುವಿನ ವಿಶ್ವಾಸ ಹೊಂದಿದೆ.

ಭಾರತ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಅಮೋಘ ಸಾಮರ್ಥ್ಯ ತೋರುತ್ತಿರುವುದರಿಂದ ಚೊಚ್ಚಲ ಪ್ರಶಸ್ತಿಯ ಕನಸು ಗರಿಗೆದರಿದೆ. ಆರಂಭಿಕರಾಗಿ ಕಣಕ್ಕಿಳಿಯುವ ಪೂನಂ ರಾವುತ್‌ ಮತ್ತು ಸ್ಮೃತಿ ಮಂದಾನ ಅವರು ತಂಡಕ್ಕೆ ಭದ್ರ ಅಡಿ ಪಾಯ ಹಾಕಿಕೊಡುತ್ತಿದ್ದಾರೆ.

ಇಂಗ್ಲೆಂಡ್‌ ವಿರುದ್ಧ  ಈ ಜೋಡಿ ಶತಕದ ಜೊತೆ ಯಾಟ ಆಡಿತ್ತು.  ಮೊದಲ ಪಂದ್ಯದಲ್ಲಿ 90ರನ್‌ ಗಳಿಸಿ ಗಮನ ಸೆಳೆದಿದ್ದ ಮಂದಾನ, ವಿಂಡೀಸ್‌ ವಿರುದ್ಧ ಅಜೇಯ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಪೂನಂ ಅವರು ಇಂಗ್ಲೆಂಡ್‌ ವಿರುದ್ಧ 86ರನ್‌ ಗಳಿಸಿದ್ದರು.  ಈ ಜೋಡಿ ಪಾಕಿಸ್ತಾನದ ಬೌಲರ್‌ಗಳ ಮೇಲೂ ಸವಾರಿ ಮಾಡಲು ಕಾಯುತ್ತಿದೆ.

ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮಾ, ಶಿಖಾ ಪಾಂಡೆ ಮತ್ತು ಮೋನಾ ಮೆಷ್ರಮ್‌ ಅವರ ಬಲ ತಂಡಕ್ಕಿದೆ. ವಿಕೆಟ್‌ ಕೀಪರ್‌ ದೀಪ್ತಿ ಶರ್ಮಾ ಮತ್ತು ಜೂಲನ್‌ ಗೋಸ್ವಾಮಿ ಅವರ ಮೇಲೂ ಭರವಸೆ ಇಡಬಹುದಾಗಿದೆ.

ನಾಯಕಿ ಮಿಥಾಲಿ ಅವರು ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. ಟೂರ್ನಿಯಲ್ಲಿ ಎರಡು ಪಂದ್ಯಗಳಿಂದ ಅವರು  ಒಂದು ಅರ್ಧಶತಕ ಸಹಿತ 117ರನ್‌ಗಳನ್ನು ಕಲೆ ಹಾಕಿದ್ದಾರೆ. ಎಂತಹುದೇ ಪರಿಸ್ಥಿತಿ ಯಲ್ಲೂ ನಿರ್ಭೀತಿಯಿಂದ ಬ್ಯಾಟ್‌ ಬೀಸುವ ಸಾಮರ್ಥ್ಯ ಹೊಂದಿರುವ ಅನುಭವಿ ಮಿಥಾಲಿ, ಪಾಕ್‌ ಬೌಲರ್‌ ಗಳನ್ನೂ ಕಾಡಬಲ್ಲ ಸಮರ್ಥರಾಗಿದ್ದಾರೆ.

ಬೌಲಿಂಗ್‌ನಲ್ಲೂ ಭಾರತ ತಂಡ ಬಲಯುತವಾಗಿದೆ. ಹಿಂದಿನ ಪಂದ್ಯದಲ್ಲಿ ವಿಂಡೀಸ್‌ ತಂಡವನ್ನು 183ರನ್‌ಗಳಿಗೆ ಕಟ್ಟಿ ಹಾಕಿದ್ದು  ಮಿಥಾಲಿ ಪಡೆಯ  ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಪೂನಂ ಯಾದವ್‌ ಮತ್ತು ಹರ್ಮನ್‌ ಪ್ರೀತ್‌ ಅವರು ಕೆರಿಬಿಯನ್‌ ನಾಡಿನ ವಿರುದ್ಧ ತಲಾ ಎರಡು ವಿಕೆಟ್‌ ಕಬಳಿಸಿ ಮಿಂಚಿದ್ದರು.

ಇವರು ತಮ್ಮ ಬತ್ತಳಿಕೆ ಯಲ್ಲಿ ಇರುವ ಸ್ಪಿನ್‌ ಅಸ್ತ್ರಗಳನ್ನು ಪ್ರಯೋ ಗಿಸಿ ಪಾಕಿಸ್ತಾನದ ಆಟಗಾರ್ತಿಯರನ್ನೂ ಕಟ್ಟಿ ಹಾಕಲು ಸನ್ನದ್ಧರಾಗಿದ್ದಾರೆ. ಆದರೆ ವೇಗಿ ಜೂಲನ್‌ ಗೋಸ್ವಾಮಿ ಅವರು ವಿಕೆಟ್‌ ಪಡೆಯಲು ವಿಫಲರಾಗುತ್ತಿರುವುದು ನಾಯಕಿ ಮಿಥಾಲಿ ಚಿಂತೆಗೆ ಕಾರಣ ವಾಗಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಜೂಲನ್‌ ಆರಂಭದಲ್ಲೇ ವಿಕೆಟ್‌ ಪಡೆದು ತಂಡಕ್ಕೆ ಮೇಲುಗೈ ತಂದು ಕೊಡಬೇಕಿದೆ.

ಮೊದಲ ಜಯದ ನಿರೀಕ್ಷೆ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಪಾಕಿ ಸ್ತಾನ ತಂಡ ಭಾರತದ ವಿರುದ್ಧ ಪುಟಿ ದೇಳುವ ವಿಶ್ವಾಸ ಹೊಂದಿದೆ.

ಮೊದಲ ಪಂದ್ಯದಲ್ಲಿ 3 ವಿಕೆಟ್‌ ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಸನಾ ಮಿರ್ ಬಳಗ ನಂತರದ ಪಂದ್ಯದಲ್ಲಿ 107ರನ್‌ಗಳಿಂದ ಆತಿ ಥೇಯ ಇಂಗ್ಲೆಂಡ್‌ಗೆ ಶರಣಾಗಿತ್ತು.

ಈ ತಂಡ ಸೆಮಿಫೈನಲ್‌ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲ್ಲ ಬೇಕು. ಈ ನಿಟ್ಟಿನಲ್ಲಿ ಭಾರತದ ಎದುರಿನ ಹೋರಾಟ ಸನಾ ಪಡೆಗೆ ಮಹತ್ವ ದ್ದೆನಿಸಿದೆ. ಆರಂಭಿಕರಾದ ಆಯೇಷಾ ಜಾಫರ್‌ ಮತ್ತು ನಹಿದಾ ಖಾನ್‌ ಅವರು ಕ್ರಮವಾಗಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಆದರೆ ಇತರ ಆಟಗಾರ್ತಿಯರು ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು.

ಜವೇರಿಯಾ ಖಾನ್‌, ಬಿಸ್ಮಾ ಮರೂಫ್‌, ನೈನಾ ಅಬಿದಿ ಮತ್ತು ಕೈನತ್‌ ಇಮ್ತಿಯಾಜ್‌ ಅವರು ಭಾರತದ ವಿರುದ್ಧ ಗರ್ಜಿಸುವುದು ಅಗತ್ಯ. ಸಾದಿಯಾ ಯೂಸುಫ್‌, ಅಸ್ಮವಿಯಾ ಇಕ್ಬಾಲ್‌ ಮತ್ತು ಕೈನಾತ್‌ ಇಮ್ತಿಯಾಜ್‌ ಅವರು ಬೌಲಿಂಗ್‌ನಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದು ಇವರು ಭಾರತದ ಆಟ ಗಾರ್ತಿಯರನ್ನು ಕಟ್ಟಿ ಹಾಕಲು ಯಾವ ಬಗೆಯ ಯೋಜನೆ ಹೆಣೆದು ಕಣಕ್ಕಿಳಿಯು ತ್ತಾರೆ ಎಂಬ ಕುತೂಹಲ ಗರಿಗೆದರಿದೆ.

ಆರಂಭ: ಮಧ್ಯಾಹ್ನ 3ಕ್ಕೆ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಪ್ರತಿಕ್ರಿಯಿಸಿ (+)