ಶುಕ್ರವಾರ, ಡಿಸೆಂಬರ್ 6, 2019
18 °C

ಅಕ್ಕಿಆಲೂರಿನಲ್ಲಿ ಶೇ 79ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರಿನಲ್ಲಿ ಶೇ 79ರಷ್ಟು ಮತದಾನ

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಆಡೂರು ಗ್ರಾಮ ಪಂಚಾಯ್ತಿಯ 1ನೇ ವಾರ್ಡಿನ ಸದಸ್ಯ ಮಧುಸೂಧನ ಕುಲಕರ್ಣಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ಚುರುಕಿನಿಂದ ನಡೆದಿದ್ದು, ಶೇ 79ರಷ್ಟು ಶಾಂತಿಯುತವಾಗಿ ಮತದಾನವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮತ ಕೇಂದ್ರ ತೆರೆಯಲಾಗಿತ್ತು. 

ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು ಮತದಾರರು ಮತ ಚಲಾಯಿಸಿ ದರು. ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ವಾಹನಗಳ ಮೂಲಕ ಮತಕೇಂದ್ರಕ್ಕೆ ಕರೆತರುತ್ತಿದ್ದ ದೃಶ್ಯ ಕಂಡು ಬಂದಿತು. ಕೇಂದ್ರದ ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಿದ್ದರು.

ಉಪ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ದೊಡ್ಡಗೌಡ ಬಸನಗೌಡ ಪಾಟೀಲ, ಕಾಂಗ್ರೆಸ್‌ ಬೆಂಬ ಲಿತ ಅಭ್ಯರ್ಥಿಯಾಗಿ ಹೇಮನಗೌಡ ಚನ್ನಬಸನಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿಯಾಗಿ ಮಾರುತಿ ಖಂಡಪ್ಪ ನಿಕ್ಕಂ ಸ್ಪರ್ಧೆಯಲ್ಲಿದ್ದಾರೆ. 5 ರಂದು ಹಾನಗಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ.

ರಾಣೆಬೆನ್ನೂರು ವರದಿ

ಇಲ್ಲಿನ ಕುರಬಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರಸಭೆಯ 30ನೇ ವಾರ್ಡ್‌ಗೆ ಭಾನುವಾರ ಶಾಂತಿ ಯತವಾಗಿ ಉಪಚುನಾವಣೆ ನಡೆಯಿತು. ಇದೇ ವಾರ್ಡ್‌ನಿಂದ ಆಯ್ಕೆಗೊಂಡು ಅಧ್ಯಕ್ಷರಾಗಿದ್ದ ನೀಲಮ್ಮ ಬುರಡಿಕಟ್ಟಿಯವರ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.

ಬೆಳಿಗ್ಗೆ ಮಂದಗತಿಯಿಂದ ಸಾಗಿದ್ದ ಮತದಾನ ಮಧ್ಯಾಹ್ನದ ನಂತರ  ಚುರುಕು ಪಡೆದಿಕೊಂಡಿತು. ಅಂತಿಮ ವಾಗಿ ಶೇ 72.26ರಷ್ಟು ಮತದಾನವಾಗಿದೆ. ಒಟ್ಟು 3797 ಮತದಾರರಲ್ಲಿ 1884 ಪುರುಷರ ಹಾಗೂ 1913 ಮಹಿಳೆಯರು ಇದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಉಮಾಬಾಯಿ ಕಂಬಳಿ, ಬಿಜೆಪಿಯ ಪ್ರಭಾವತಿ ತಿಳವಳ್ಳಿ, ಪಕ್ಷೇತರ ಅಭ್ಯರ್ಥಿಗಳಾಗಿ ರಾಧಿಕಾ ಬುರಡಿಕಟ್ಟಿ ಮತ್ತು ಆಶಾ ಮಾದೇವಮ್ಮನವರ ಸ್ಪರ್ಧಾ ಕಣದಲ್ಲಿದ್ದರು. ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಸಂಚಾರಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಫ್‌.ಎಂ. ಹಂಸನೂರ ಅವರು ಮತದಾನ ಶಾಂತಿಯುತವಾಗಿ ನಡೆಯಲು ಪೊಲೀಸರು ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು. ಜುಲೈ 5ರಂದು ಬೆಳಿಗ್ಗೆ 8ಕ್ಕೆ ಇಲ್ಲಿನ ಮಿನಿವಿಧಾನ ಸೌಧದಲ್ಲಿ ಮತಗಳ ಏಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಬಗಾದಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)