ಬುಧವಾರ, ಡಿಸೆಂಬರ್ 11, 2019
25 °C

₹200 ಮುಖಬೆಲೆಯ ನೋಟು ಮುದ್ರಣ: ಆರ್‌ಬಿಐ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

₹200 ಮುಖಬೆಲೆಯ ನೋಟು ಮುದ್ರಣ: ಆರ್‌ಬಿಐ

ನವದೆಹಲಿ: ನೋಟು ಅಮಾನ್ಯೀಕರಣದ ಬಳಿಕ ₹500 ಮತ್ತು ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಈಗ ₹200 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ.

‘ಆರ್‌ಬಿಐ ₹200 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುತ್ತಿದ್ದು, ನೋಟುಗಳ ಮುದ್ರಣಕ್ಕೆ ಆದೇಶ ನೀಡಿದೆ’ ಎಂದು ಮೂಲಗಳು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

₹200 ನೋಟುಗಳನ್ನು ಚಲಾವಣೆಗೆ ತರುವ ಸಂಬಂಧ ಆರ್‌ಬಿಐ ಮಾರ್ಚ್‌ನಲ್ಲಿ ಹಣಕಾಸು ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ ಮತ್ತೊಂದು ಟ್ವೀಟ್‌ ಮಾಡಿದೆ.

ಪ್ರತಿಕ್ರಿಯಿಸಿ (+)