ಭಾನುವಾರ, ಡಿಸೆಂಬರ್ 8, 2019
21 °C

ಸಿನಿರಂಗಕ್ಕೆ ಅನನ್ಯಾ ಪಾಂಡೆ

Published:
Updated:
ಸಿನಿರಂಗಕ್ಕೆ ಅನನ್ಯಾ ಪಾಂಡೆ

ಬಾಲಿವುಡ್‌ನಲ್ಲಿ ಖ್ಯಾತ ನಟ-ನಟಿಯರ ಪುತ್ರರು ಸಿನಿರಂಗ ಪ್ರವೇಶಿಸುವುದು ಹೊಸದೇನಲ್ಲ. ಈ ಬಾರಿ ಖಳನಟ ಚಂಕಿ ಪಾಂಡೆಯ ಮಗಳು ಅನನ್ಯಾಳ ಸರದಿ. 

ನಿರ್ದೇಶಕ ಕರಣ್‌ ಜೋಹರ್ ನಿರ್ದೇಶಿಸಲಿರುವ ‘ಸ್ಟೂಡೆಂಟ್ ಆಫ್ ದಿ ಇಯರ್‘ ಚಿತ್ರದ ಎರಡನೇ ಭಾಗಕ್ಕೆ ಅನನ್ಯಾ ಪಾಂಡೆ ಆಯ್ಕೆಯಾಗಿದ್ದಾಳೆ.

ಈ ಚಿತ್ರದಲ್ಲಿ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್, ಸಾರಾ ಅಲಿ ಖಾನ್ ಕೂಡಾ ನಟಿಸುತ್ತಿರುವುದು ವಿಶೇಷ.

ಈಗಾಗಲೇ ನಟನೆ, ನೃತ್ಯದಲ್ಲಿ ಪಳಗಿರುವ ಅನನ್ಯಾ, ಸೆಲೆಬ್ರೆಟಿ ಫಿಟ್‌ನೆಸ್ ತರಬೇತಿಗಾರ ಯಾಸ್ಮಿನ್ ಕರಾಚಿವಾಲ ಅವರಿಂದ ಫಿಟ್‌ನೆಸ್ ತರಬೇತಿ ಕೂಡಾ ಪಡೆದಿದ್ದಾಳಂತೆ.

ಅನನ್ಯಾ ಜೊತೆ ಚಂಕಿ ಪಾಂಡೆಯ ಸೊಸೆ ಅಹಾನಾ ಪಾಂಡೆ ಕೂಡಾ ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂಬುದು ಚಂಕಿ ಪಾಂಡೆ ಸಲಹೆ.

ಪ್ರತಿಕ್ರಿಯಿಸಿ (+)