ಭಾನುವಾರ, ಡಿಸೆಂಬರ್ 15, 2019
21 °C

ಜಿಮೇಲ್‌ನಲ್ಲಿ ಹೊಸ ಲೇಬಲ್‌ ಸೃಷ್ಟಿಸುವುದು ಹೇಗೆ?

ದಯಾನಂದ Updated:

ಅಕ್ಷರ ಗಾತ್ರ : | |

ಜಿಮೇಲ್‌ನಲ್ಲಿ ಹೊಸ ಲೇಬಲ್‌ ಸೃಷ್ಟಿಸುವುದು ಹೇಗೆ?

ಜಿಮೇಲ್‌ ಬಳಸುವವರು ಇನ್‌ಬಾಕ್ಸ್‌, ಸೆಂಟ್‌ ಐಟಮ್ಸ್‌, ಸ್ಪಾಮ್‌, ಬಿನ್‌ಗಳನ್ನಷ್ಟೇ ನೋಡುವುದು ಸಾಮಾನ್ಯ. ಆದರೆ, ಜಿಮೇಲ್‌ನಲ್ಲಿ ಇವುಗಳ ಜತೆಗೆ ಸ್ಟಾರ್ಡ್‌, ಇಂಪಾರ್ಟಂಟ್‌ ಲೇಬಲ್‌ಗಳೂ ಇರುತ್ತವೆ. ಸ್ಟಾರ್‌ ಚಿಹ್ನೆ ಹಳದಿಯಾಗಿರುವ ಮೇಲ್‌ಗಳು ಸ್ಟಾರ್ಡ್‌ ಬಾಕ್ಸ್‌ನಲ್ಲೂ, ಆಯತ ಬಾಣದಾಕಾರದ ಚಿಹ್ನೆ ಹಳದಿಯಾಗಿರುವ ಮೇಲ್‌ಗಳು ಇಂಪಾರ್ಟಂಟ್‌ ಬಾಕ್ಸ್‌ನಲ್ಲೂ ಒಂದೆಡೆ ಸಿಗುತ್ತವೆ. ನೀವೂ ಬೇಕಾದರೆ ನಿಮ್ಮ ಇನ್‌ಬಾಕ್ಸ್‌ ಅಥವಾ ಸೆಂಟ್‌ ಐಟಮ್ಸ್‌ನಲ್ಲಿರುವ ಮೇಲ್‌ಗಳನ್ನು ಈ ಯಾವುದಾರರೂ ಬಾಕ್ಸ್‌ಗೆ ಪರ್ಸನಲೈಸ್‌ ಮಾಡಬಹುದು. ಹೀಗೆ ಸ್ಟಾರ್‌ ಇಲ್ಲವೇ ಇಂಪಾರ್ಟಂಟ್‌ ಪಟ್ಟಿಗೆ ಮೇಲ್‌ಗಳನ್ನು ಸೇರಿಸುವುದು ಮಾತ್ರವಲ್ಲದೆ ನಿಮಗೆ ಬೇಕಾದ ಹೆಸರಿನಲ್ಲಿ ಹೊಸ ಲೇಬಲ್ ಸೃಷ್ಟಿಸಲು ಜಿಮೇಲ್‌ನಲ್ಲಿ ಅವಕಾಶವಿದೆ. ಹೀಗೆ ಲೇಬಲ್‌ ಸೃಷ್ಟಿಸುವುದು ಸುಲಭದ ಕೆಲಸವೂ ಹೌದು. ಕೆಲವು ಸರಳ ವಿಧಾನಗಳ ಮೂಲಕ ನಿಮಗೆ ಬೇಕಾದ ಲೇಬಲ್‌ಗಳನ್ನು ನಿಮಿಷದಲ್ಲೇ ಸೃಷ್ಟಿಸಿ ಕೊಳ್ಳಬಹುದು.

ಜಿಮೇಲ್‌ಗೆ ಲಾಗ್‌ಇನ್‌ ಆದ ಬಳಿಕ ಕಂಪೋಸ್‌ ಕೆಳಗೆ ಕಾಣುವ More ಎಂಬಲ್ಲಿ ಕ್ಲಿಕ್‌ ಮಾಡಿ. ಇಲ್ಲಿ ಕೊನೆಯಲ್ಲಿ ಕಾಣುವ Create new label ಮೇಲೆ ಕ್ಲಿಕ್ಕಿಸಿ. ಈಗ ನಿಮಗೆ ಬೇಕಾದ ಹೆಸರು ನೀಡಿ, ಬೇಕಾದ ಕೆಟಗರಿ ಆಯ್ಕೆ ಮಾಡಿಕೊಂಡು Create ಒತ್ತಿ. ಕ್ಷಣದಲ್ಲೇ ನಿಮ್ಮ ಹೊಸ ಲೇಬಲ್‌ ಸೃಷ್ಟಿಯಾಗುತ್ತದೆ.  ನೀವು ಯಾವ ಮೇಲ್‌ಗಳನ್ನು ಈ ಲೇಬಲ್‌ಗೆ ಆಯ್ಕೆ ಮಾಡುತ್ತೀರೋ ಆ ಮೇಲ್‌ಗಳೆಲ್ಲವೂ ಈ ಬಾಕ್ಸ್‌ನಲ್ಲಿ ಒಂದೆಡೆ ಸಿಗುತ್ತವೆ.

ನೀವು ಸೃಷ್ಟಿಸಿದ ಲೇಬಲ್‌ನ ಹೆಸರು ಬದಲಿಸಲೂ ಇಲ್ಲಿ ಅವಕಾಶವಿದೆ. ಇದಕ್ಕಾಗಿ ಲೇಬಲ್‌ನ ಬಲಭಾಗದಲ್ಲಿ ಕ್ಲಿಕ್‌ ಮಾಡಿ. ಕೆಳಗೆ ಕಾಣುವ ಆಯ್ಕೆಗಳಲ್ಲಿ Edit ಮೇಲೆ ಕ್ಲಿಕ್ಕಿಸಿ. ಈಗ ನಿಮಗೆ ಬೇಕಾದ ಹೆಸರು ನೀಡಿ Save ಒತ್ತಿದರೆ ಆಯಿತು. ನಿಮ್ಮ ಲೇಬಲ್‌ನ ಹೆಸರು ಬದಲಾಗುತ್ತದೆ. ಒಂದು ವೇಳೆ ನಿಮಗೆ ಈ ಲೇಬಲ್‌ ಬೇಡವೆಂದರೆ ಲೇಬಲ್‌ನ ಬಲಭಾಗಕ್ಕೆ ಕ್ಲಿಕ್‌ ಮಾಡಿ ಕೆಳಗಿನ ಆಯ್ಕೆಗಳಲ್ಲಿ Remove label ಮೇಲೆ ಕ್ಲಿಕ್ಕಿಸಿ. ಅಂದಹಾಗೆ, ನೀವು Remove ಮಾಡುವ ಲೇಬಲ್‌ನಲ್ಲಿರುವ ಮೇಲ್‌ಗಳೆಲ್ಲವೂ ಡಿಲೀಟ್‌ ಆಗುತ್ತವೆ ಎಂಬುದೂ ನಿಮ್ಮ ಗಮನದಲ್ಲಿರಲಿ.

ಪ್ರತಿಕ್ರಿಯಿಸಿ (+)