ಭಾನುವಾರ, ಡಿಸೆಂಬರ್ 8, 2019
24 °C

ಅಬ್ಬಾ! ದೊಡ್ಡ ಪಿಜ್ಜಾ

Published:
Updated:
ಅಬ್ಬಾ! ದೊಡ್ಡ ಪಿಜ್ಜಾ

ಜಗತ್ತಿನಾದ್ಯಂತ ಈಗ ಪಿಜ್ಜಾಪ್ರಿಯರಿದ್ದಾರೆ. ದೋಸೆ ಆಕಾರದ ಪಿಜ್ಜಾವನ್ನು ನಾವು ನೋಡಿದ್ದೇವೆ. ಆದರೆ ಕ್ಯಾಲಿಫೋರ್ನಿಯಾದ ನೂರು ಮಂದಿ ಬಾಣಸಿಗರು ಜಗತ್ತಿನ ಅತಿ ಉದ್ದದ ಪಿಜ್ಜಾ ತಯಾರಿಸಿ ಗಿನ್ನೆಸ್‌ ದಾಖಲೆ ಮಾಡಿದ್ದಾರೆ.

ಈ ಪಿಜ್ಜಾ 1930.39 ಮೀಟರ್‌ (6333 ಅಡಿ) ಉದ್ದವಿದೆ. ಪಿಜ್ಜಾಗೆ 3632 ಕೆ.ಜಿ ನಾದಿದ ಹಿಟ್ಟು, 1634 ಕೆ.ಜಿ. ಚೀಸ್‌, 2542 ಕೆ.ಜಿ. ಸಾಸ್‌ ಬಳಸಲಾಗಿದೆ.

ಅಮೆರಿಕಾದ ರೆಸ್ಟೊರೆಂಟ್‌ ಉಪಕರಣ ಕಂಪೆನಿ Pizzaovens.com ಗಿನ್ನೆಸ್‌ ವಿಶ್ವದಾಖಲೆಗೆ ವೇದಿಕೆ ಸಿದ್ಧಪಡಿಸಿತ್ತು. ಮೂರು ಇಂಡಸ್ಟ್ರಿಯಲ್‌ ಓವೆನ್‌ಗಳಲ್ಲಿ ಎಂಟು ಗಂಟೆಗಳ ಕಾಲ ಪಿಜ್ಜಾ ಬೇಯಿಸಲಾಯಿತು.

ಕತ್ತರಿಸಿದ ಪಿಜ್ಜಾವನ್ನು ಫುಡ್‌ ಬ್ಯಾಂಕ್‌ಗಳಿಗೆ ಹಾಗೂ ವಸತಿ ಇಲ್ಲದ ಜನರಿಗೆ ಹಂಚಲಾಯಿತು. ಈ ಮೊದಲು ಇಟಲಿಯಲ್ಲಿ ತಯಾರಿಸಿದ್ದ 1853.88 ಮೀಟರ್‌ ಉದ್ದದ ಪಿಜ್ಜಾ ವಿಶ್ವದಾಖಲೆಯಾಗಿತ್ತು.

ಪ್ರತಿಕ್ರಿಯಿಸಿ (+)