ಶುಕ್ರವಾರ, ಡಿಸೆಂಬರ್ 13, 2019
20 °C

ಮೇಧಾ ಪಾಟ್ಕರ್‌ ರ‍್ಯಾಲಿಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಧಾ ಪಾಟ್ಕರ್‌ ರ‍್ಯಾಲಿಗೆ ತಡೆ

ಮಂದಸೌರ್‌: ಸಾಮಾಜಿಕ ಕಾರ್ಯಕರ್ತರಾದ ಯೋಗೇಂದ್ರ ಯಾದವ್‌ ಮತ್ತು ಮೇಧಾ ಪಾಟ್ಕರ್‌ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ರೈತರ ಬೃಹತ್‌ ರ‍್ಯಾಲಿಗೆ  ಪೊಲೀಸರು ಚಂಪಾರಣ್‌ನಲ್ಲಿ ತಡೆ ಒಡ್ಡಿದ್ದಾರೆ.

ಪಿಪಾಲಿಯಾ ಮಂಡಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಐವರು ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಬಹೀ–ಫಟ್ನಾದಲ್ಲಿ ಸಭೆ ಸೇರಲು ಸಾಮಾಜಿಕ ಕಾರ್ಯಕರ್ತರು ಮತ್ತು ರೈತರು ಯೋಜಿಸಿದ್ದರು.

ಅಲ್ಲಿಂದ ಪಿಪಾಲಿಯಾ ಮಂಡಿವರೆಗೆ ರ‍್ಯಾಲಿ ನಡೆಸಲು ಅವರು ನಿರ್ಧರಿಸಿದ್ದರು.ಆದರೆ, ಅರ್ಧದಾರಿಯಲ್ಲೇ ಮೇಧಾ ಭಾಗವಹಿಸಿದ್ದ ರ‍್ಯಾಲಿಯನ್ನು ಪೊಲೀಸರು ತಡೆದರು.

ಪ್ರತಿಕ್ರಿಯಿಸಿ (+)